Select Your Language

Notifications

webdunia
webdunia
webdunia
Friday, 4 April 2025
webdunia

ಜೆಡಿಎಸ್‌ ಬಿಜೆಪಿಯ ‘ಬಿ’ ಟೀಂ

JDS BJP's BBC Team
bangalore , ಸೋಮವಾರ, 18 ಏಪ್ರಿಲ್ 2022 (18:07 IST)
'ಬಿಜೆಪಿಯ ಬಿ ಟೀಂ ಜೆಡಿಎಸ್‌ಗೆ ಯಾವುದೇ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರಬಾರದು. ಯಾವಾಗಲೂ ಹೊಂದಾಣಿಕೆಗೆ ಕಾಯುತ್ತಿರುತ್ತಾರೆ' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಜೆಡಿಎಸ್‌ನ್ನು ಟೀಕಿಸಿದ್ದಾರೆ. 'ಜೆಡಿಎಸ್‌ನವರು 30 ಸ್ಥಾನ ಗೆದ್ದರೆ ಸಾಕು ಅಂತಾರೆ. ಹಿಂದೆ ಉತ್ತಮ ಆಡಳಿತ ನೀಡಲಿ ಎಂಬ ಕಾರಣಕ್ಕೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು. ಕೊಟ್ಟ ಕುದುರೆ ಏರದವನು ಶೂರನೂ ಅಲ್ಲ; ಧೀರನೂ ಅಲ್ಲ ಎಂಬಂತೆ ನನ್ನಿಂದ ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು ಎಂದು ಆರೋಪ ಮಾಡಿದ್ದಾರೆ. 'ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಏಕೆ ಬಂಧಿಸಬೇಕು? ಹಿಂದೆ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿಯೂ ಹೀಗೆ ಮಾಡಿದ್ದೀರಾ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳುತ್ತಾರೆ. ಇದಕ್ಕೆ ಜೆಡಿಎಸ್‌ ಬಿಜೆಪಿಯ ಬಿ.ಟೀಂ ಎನ್ನುವುದು' ಎಂದು ವ್ಯಂಗ್ಯವಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಜೇಮ್ಸ್ ಸಿನಿಮಾ ರೀ ರಿಲೀಸ್