ವಿಶ್ವಾಸದ ಮೇಲೆ ಸಂತೋಷ್ ಕೆಲಸ ಮಾಡಿದ್ದರು. ಅವಮಾನ ಮಾಡಿ, ಕಾಯಿಸಿದ್ದೇ ಅವರ ಆತ್ಮಹತ್ಯೆಗೆ ಕಾರಣ. ಈ ಬಗ್ಗೆ ಮಾತನಾಡಲು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನೈತಿಕತೆ ಇಲ್ಲ ಅಂತ ಆಪ್ ಮುಖಂಡ ಭಾಸ್ಕರ್ ರಾವ್ ಕಿಡಿ ಕಾರಿದ್ದಾರೆ.. ಕಾಮಗಾರಿ ಪ್ರಾರಂಭವಾದ ಬಳಿಕವಾದ್ರೂ ಹಣ ಬಿಡುಗಡೆ ಮಾಡಿಸಬೇಕಿತ್ತು. ಎರಡೂ ಪಕ್ಷಗಳು ಮೊಸಳೆ ಕಣ್ಣೀರು ಹಾಕೋದು ಮೊದಲು ಬಿಡಬೇಕು. ಆಪ್‌ಗೆ ಮಾತ್ರ ಈ ಬಗ್ಗೆ ಮಾತನಾಡಲು ನೈತಿಕ ಹಕ್ಕು ಇದೆ ..ಸಂತೋಷ್ ಮನವಿ ಕೊಟ್ಟಿದ್ದ ವೇಳೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಪ್ರಕರಣ CID ತನಿಖೆಗೆ ಕೊಡ್ತಿವಿ ಅಂತ ಯಾರೊಬ್ಬರು ಹೇಳಿಲ್ಲ. ಸಾಮಾನ್ಯ ಜನ ಯಾರಾದ್ರು ಆತ್ಮಹತ್ಯೆಗೆ ಕಾರಣರಾಗಿದ್ದರೆ ಅವರನ್ನು ಬಂಧಿಸುತ್ತಿದ್ದರು.ಇದೀಗ FIRನಲ್ಲಿ ಇರುವ ಆರೋಪಿಗಳ ಬಂಧನ ಆಗಬೇಕು. ಇಂತಹ ಪ್ರಕರಣದಲ್ಲಿ ಸರ್ಕಾರವೇ ತನಿಖಾಧಿಕಾರಿ ಆಗುತ್ತೆ. ಆದರೆ ತನಿಖಾಧಿಕಾರಿಗಳಿಗೆ ಎಲ್ಲಾ ಸ್ವಾತಂತ್ರ್ಯ ಕೊಡಬೇಕು ಅಂತ ತಿಳಿಸಿದ್ರು.