Webdunia - Bharat's app for daily news and videos

Install App

ಕೋವಿಡ್ ಏಂಜಲ್ಸ್ ಕುಟುಂಗಳಿಗೆ ವಂಡರ್‌ಲಾ ಉಚಿತ ಪಾಸ್

Webdunia
ಶನಿವಾರ, 31 ಜುಲೈ 2021 (18:58 IST)
ಬೆಂಗಳೂರು: ಕೋವಿಡ್‌ಗಾಗಿ ಹಗಲಿರುಳು ಶ್ರಮಿಸುತ್ತಿರುವ ಕೋವಿಡ್ ಫ್ರಂಟ್‌ಲೈನ್ ವಾರಿಯರ್ಸ್‌ಗಳಿಗಾಗಿ (ಕೋವಿಡ್ ಏಂಜಲ್ಸ್) ವಂಡರ್‌ಲಾ ಹಾಲಿಡೇಸ್ ಗೌರವಾರ್ಥವಾಗಿ ಉಚಿತ ವಂಡರ್‌ಲಾ ಪಾರ್ಕ್ ಪಾಸ್ ನೀಡಲು ಮುಂದಾಗಿದೆ.
 
ವೈದ್ಯರು, ನರ್ಸ್‌ಗಳು, ಸಹಾಯಕ ಸಿಬ್ಬಂದಿ, ಮಾಧ್ಯಮ ವರದಿಗಾರರು, ಪೊಲೀಸರು, ಸ್ಮಶಾನದಲ್ಲಿ ಕೆಲಸ ಮಾಡುವವರು, ಆಶಾ ಕಾರ್ಯಕರ್ತೆಯರು ಈ ಕೊಡುಗೆಗೆ ಅರ್ಹರಾಗಿದ್ದಾರೆ.  ಜೊತೆಗೆ ಸಾಮಾಜಿಕ ಕಾರ್ಯಕರ್ತರಿಗೂ ಸಹ ಉಚಿತ ಪಾಸ್ ನೀಡಲು ನಿರ್ಧರಿಸಿದೆ. ಈ ಉಚಿತ ಪಾಸ್ ಒಟ್ಟು 1500 ಕೋವಿಡ್ ಏಂಜಲ್ಸ್‌ಗಳು ಹಾಗೂ ಅವರ ಕುಟುಂಬವೂ ಸೇರಿದಂತೆ ಒಟ್ಟು 6 ಸಾವಿರ ಮಂದಿಗೆ ಸಿಗಲಿದೆ. ಜೊತೆಗೆ ಭೋಜನ, ಚಹಾ ಹಾಗೂ ಎಲ್ಲಾ ರೈಡ್‌ಗಳ ಬಳಕೆಗೂ ಉಚಿತ ಅವಕಾಶವಿರಲಿದೆ. ಇದರ ಉಪಯೋಗ ಪಡೆಯಲು ಅರ್ಹರು  http://www.wonderla.com ವಂಡರ್‌ಲಾ ವೆಬ್‌ಸೈಟ್‌ನಲ್ಲಿ ಭೇಟಿ ನೀಡಬಹುದು.
ತಮ್ಮ ಸುತ್ತಮುತ್ತಲು ಇರುವ ಈ ವಾರಿಯರ್ಸ್‌‌ಗಳ ಕೆಲಸಗಳನ್ನು ಎತ್ತಿ ತೋರಿಸುವ ವಿಡಿಯೋ ಹಾಗೂ ಫೋಟೋಗಳನ್ನು @wonderla_in ಅಥವಾ  wonderla @ facebook.com/ Wonderla ಫೇಸ್‌ಬುಕ್ ಪೇಜ್‌ಗೆ ಟ್ಯಾಗ್ ಮಾಡಬಹುದು. ಈ ಕೊಡುಗೆಯು ಆಗಸ್ಟ್ 2ರಿಂದ 8ರವರೆಗೆ ಇರಲಿದ್ದು, ಈ ಅವಧಿಯೊಳಗೆ ನೋಂದಣಿ ಮಾಡಿಕೊಳ್ಳಬಹುದು. ಅಥವಾ 08037230333 ಮತ್ತು 080 35073966 ಇಲ್ಲಿಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು. ಆಯ್ಕೆಯಾದ 1500 ಕೋವಿಡ್ ಏಂಜಲ್ಸ್ ಕುಟುಂಬಗಳಿಗೆ (6000 ಜನ) ಉಚಿತ ಪಾಸ್ ಜೊತೆಗೆ ಇತರೆ ಸೌಲಭ್ಯ ಹಾಗೂ ಗೌರ
ವಗಳು ಸಲ್ಲಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ರಾಜ್ಯದಲ್ಲಿ ಇಂದು ಹೇಗಿರಲಿದೆ ಮಳೆ ಪರಿಸ್ಥಿತಿ ಇಲ್ಲಿದೆ ವಿವರ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಮುಂದಿನ ಸುದ್ದಿ
Show comments