Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ 500 ಕೋಟಿ ವಂಚನೆ!

real estate
bengaluru , ಗುರುವಾರ, 29 ಜುಲೈ 2021 (17:24 IST)
ರಾಜಾಜಿನಗರದ ಮೂರನೇ ಹಂತದ ಬೃಂದಾವನ ಪ್ರಾಪರ್ಟಿಸ್ 5ರಿಂದ 6 ಲಕ್ಷ ರೂ.ಗಳಿಗೆ ನಗರದ ಹೊರವಲಯದಲ್ಲಿ ಸೈಟ್ ಕೊಡಿಸುವುದಾಗಿ ತಾವರೆಕರೆ, ಹೆಸರಘಟ್ಟ, ನೆಲಮಂಗಲ ಕಡೆ ನಿವೇಶನ ತೋರಿಸಿ ನೂರಾರು ಜನರಿಗೆ ವಂಚನೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.
ದಿನೇಶ್ ಗೌಡ ಒಡೆತನದ ಬೃಂದಾವನ್ ಪ್ರಾಪರ್ಟಿಸ್ ಕಂಪನಿ ಕಳೆದ ಐದು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿತ್ತು. ಇದೀಗ ಕಂಪನಿಯನ್ನು ಮುಚ್ಚಿ ಮಾಲೀಕರು ಪರಾರಿಯಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹಣ ಹೂಡಿಕೆ ಮಾಡಿದ ಸಾರ್ವಜನಿಕರು ಬೃಂದಾವನ ಪ್ರಾಟರ್ಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದು, ಹಣ ವಾಪಸ್ ಕೊಡಿಸುವಂತೆ ಆಗ್ರಹಿಸಿದ್ದಾರೆ. ಕಂಪನಿಯಲ್ಲಿ ಕ್ಯಾಬ್ ಚಾಲಕರು, ಪ್ಲಂಬರ್, ಹೋಟೆಲ್ ಸಪ್ಲೈಯರ್ ಗಳು ಹಣ ಹೂಡಿಕೆ ಮಾಡಿದ್ದಾರೆ.
ಸ್ಥಳಕ್ಕೆ ರಾಜಾಜಿನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ವಂಚನೆ ಬಗ್ಗೆ ದೂರು ನೀಡುವಂತೆ ಪೊಲೀಸರಿಂದ ಸೂಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಬೈಲ್ ಕದಿಯುವ ಭರದಲ್ಲಿ ಬಾವಿಗೆ ಬಿದ್ದು ಕಳ್ಳ ಸಾವು