Select Your Language

Notifications

webdunia
webdunia
webdunia
webdunia

ಚಿರತೆಗಳ ದಾಳಿಯಿಂದ ಪಾರಾದ ಸಾಕುನಾಯಿ!

cheeta
bengaluru , ಮಂಗಳವಾರ, 27 ಜುಲೈ 2021 (19:00 IST)
ಮೂರರಿಂದ ನಾಲ್ಕು ಚಿರತೆಗಳು ಮನೆ ಮುಂದೆ ಕಟ್ಟಿ ಹಾಕಿದ್ದ ನಾಯಿ ಮೇಲೆ ಏಕಾಏಕಿ ದಾಳಿ ಮಾಡಿದರೂ ಮನೆಯವರ ಸಮಯಪ್ರಜ್ಞೆಯಿಂದ ಬದುಕುಳಿದ ಘಟನೆ ಬೆಂಗಳೂರು ಹೊ
ರವಲಯದ ನೆಲಮಂಗಲ ತಾಲೂಕಿನ ತೊರೆಕೆಂಪಹಳ್ಳಿಯಲ್ಲಿ ನಡೆದಿದೆ.
ಹೊಲದಲ್ಲಿರುವ ಮನೆಗೆ ಮಂಗಳವಾರ ಮುಂಜಾನೆ ಸಮಯದಲ್ಲಿ ಚಿರತೆಗಳು ದಾಳಿ ಮಾಡಿದ್ದು, ಜನರು ಗಲಾಟೆ ಮಾಡಿದಾಗ ಓಡಿ ಹೋಗಿವೆ, ತೊರೆಕೆಂಪಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕ ಮನೆಮಾಡಿದ್ದು ಚಿರತೆ ಸೆರೆಗೆ ಒತ್ತಾಯ ಮಾಡಿದ್ದಾರೆ.
ಮೂರ್ನಾಲ್ಕು ಚಿರತೆಗಳು ಕಾಂಪೌಂಡ್ ಗೋಡೆಗಳನ್ನು ಜಂಪ್ ಮಾಡಿ ಮನೆಯ ಆವರಣದಲ್ಲಿದ್ದ ನಾಯಿಯ ಮೇಲೆ ದಾಳಿ ಮಾಡಿದ್ದವು ನಾಯಿ ಬೊಗಳುವುದನ್ನು ನೋಡಿ ನಾವೆಲ್ಲರೂ ಹೊರ ಬಂದು ಗಲಾಟೆ ಮಾಡಿದಾಗ ಓಡಿ ಹೋದವು ಎಂದು ಪ್ರತ್ಯಕ್ಷದರ್ಶಿ ಅನಿಲ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 1501 ಕೊರೊನಾ ಸೋಂಕು ದೃಢ; 2039 ಮಂದಿ ಡಿಸ್ಚಾರ್ಜ್