Webdunia - Bharat's app for daily news and videos

Install App

ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರ: ಇಬ್ಬರು ನೈಜಿರಿಯನ್ನರ ಬಂಧನ

teckie
Webdunia
ಶನಿವಾರ, 4 ಸೆಪ್ಟಂಬರ್ 2021 (14:07 IST)

ಪರಿಚಯ ಮಾಡಿಕೊಳ್ಳದ ಸಿಟ್ಟಿಗೆ ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಆರೋಪದಲ್ಲಿ ನೈಜೀರಿಯಾ ಮೂಲದ ಇಬ್ಬರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾ ಮೂಲದ ಟೋನಿ (35), ಉಬಾಕಾ (36) ಬಂಧಿತ ಆರೋಪಿಗಳು. ಬಾಣಸವಾಡಿ ಠಾಣೆ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಸಂತ್ರಸ್ತ ಯುವತಿ ಕಲಬುರಗಿ ಮೂಲದವರಾಗಿದ್ದು, ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸಂತ್ರಸ್ತ ಯುವತಿಗೆ ಹಲವು ವರ್ಷಗಳಿಂದ ನೈಜೀರಿಯಾ ಪ್ರಜೆ ಟೋನಿ ಪರಿಚಿತನಾಗಿದ್ದ. ಮತ್ತೋರ್ವ ಆರೋಪಿ ಉಬಾಕಾ ಹಲವು ಬಾರಿ ಯುವತಿಯನ್ನು ಪರಿಚಯ ಮಾಡಿಕೊಳ್ಳಲು ಯತ್ನಿಸಿದ್ದ. ಆದರೆ ಇಬ್ಬರ ನಡುವೆ ವೈಷಮ್ಯ ಉಂಟಾಗಿತ್ತು. ಆ.29ರಂದು ಟೋನಿ ಯುವತಿಯನ್ನು ಸ್ನೇಹಿತರ ಮನೆಗೆ ಹೋಗೋಣ ಎಂದು ಉಬಾಕಾ ಮನೆಗೆ ಕರೆದುಕೊಂಡು ಹೋಗಿದ್ದ.
ಉಬಾಕಾನನ್ನು ನೋಡಿದ ಯುವತಿ, ಟೋನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಳು. ಟೋನಿ ಯುವತಿಯನ್ನು ಸಮಾಧಾನಪಡಿಸಿ ಮೂವರು ಜೊತೆಗೆ ಕುಳಿತು ಮದ್ಯ ಸೇವಿಸಿದ್ದರು. ಕುಡಿದ ಮತ್ತಿನಲ್ಲಿದ್ದಾಗ ನನ್ನ ಮೇಲೆ ಅತ್ಯಾಚಾರ ನಡೆದಿದೆ. ನನಗೆ ಪ್ರಜ್ಞೆ ಬಂದಾಗ ತನ್ನ ಜೊತೆ ಉಬಾಕ ಬೆತ್ತಲೆಯಾಗಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

ಯುವತಿಗೆ ಹಲವು ಮಂದಿ ಆಫ್ರಿಕಾ ಪ್ರಜೆಗಳು ಸ್ನೇಹಿತರಿರೋದು ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿಯ ಮೊಬೈಲ್‍ನಲ್ಲಿ ಹಲವು ನೈಜರಿಯನ್ ನಂಬರ್‍ಗಳು ಪತ್ತೆಯಾಗಿವೆ. ಆಫ್ರಿಕಾ ಪ್ರಜೆಗಳ ಜೊತೆ ಯಾವ ಕಾರಣಕ್ಕೆ ಒಡನಾಟ ಹೊಂದಿದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

DGP Om Prakash Murder case: ಓಂ ಪ್ರಕಾಶ್ ಹತ್ಯೆಗೆ ಪ್ಲ್ಯಾನ್ ನಡೆದಿದ್ದು ಈಗಲ್ಲ: ಅಮ್ಮ, ಮಗಳ ಮಾಸ್ಟರ್ ಪ್ಲ್ಯಾನ್ ರಿವೀಲ್

Bengaluru DRDO officer: ಡಿಆರ್ ಡಿಒ ಆಫೀಸರ್ ನ ಅರೆಸ್ಟ್ ಮಾಡಿ ಎಂದ ಕನ್ನಡಿಗರು

Arecanut Price today: ಅಡಿಕೆ ಬೆಲೆ ಇಂದು ಎಷ್ಟಾಗಿದೆ ಇಲ್ಲಿದೆ ವಿವರ

Gold Price today: ದಾಖಲೆ ಬರೆದ ಚಿನ್ನದ ಬೆಲೆ, ಇಂದಿನ ರೇಟ್ ಕೇಳಿದ್ರೆ ತಲೆ ತಿರುಗುತ್ತೆ

Wing Commander assault: ಸುಳ್ಳು ಕತೆ ಕಟ್ಟಿ ಕನ್ನಡಿಗನನ್ನೇ ಅಪರಾಧಿ ಮಾಡಿದ ವಿಂಗ್ ಕಮಾಂಡರ್ ಗೆ ತಕ್ಕ ಪಾಠ ಕಲಿಸಲು ಮುಂದಾದ ಪೊಲೀಸರು

ಮುಂದಿನ ಸುದ್ದಿ
Show comments