Publish Date: Tue, 17 Jan 2023 (16:53 IST)
Updated Date: Tue, 17 Jan 2023 (20:57 IST)
ಬೆಂಗಳೂರು : ರಾಜ್ಯ ಕಾಂಗ್ರೆಸ್ ಪಾಳಯ ಈ ಬಾರಿ ಮಹಿಳಾ ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಹಟಕ್ಕೆ ಬಿದ್ದಿದೆ ಎನ್ನಲಾಗಿದೆ. ಮಹಿಳಾ ಮತದಾರರು ʼಕೈʼ ಹಿಡಿದರಷ್ಟೇ ಗೆಲುವು ಎಂಬ ಲೆಕ್ಕಾಚಾರದಲ್ಲಿ ನಾರಿಯರ ಮನ ಗೆಲ್ಲಲು ಕೈ ಪಾಳಯದಲ್ಲಿ ಸಿದ್ದತೆ ಜೋರಾಗಿದೆ.
ರಾಜ್ಯದ ಮಹಿಳಾ ಮತದಾರರ ಮನವೊಲಿಕೆಗೆ ಇನ್ನಷ್ಟು ಯೋಜನೆ ಘೋಷಣೆ ಮಾಡಲು ʼಕೈʼ ಪಾಳಯ ಮುಂದಾಗಿದೆ ಎನ್ನಲಾಗುತ್ತಿದೆ. ರಾಜ್ಯದ ಮಹಿಳಾ ಮತದಾರರ ಮನಗೆಲ್ಲುವ ಭರವಸೆ ಘೋಷಣೆಯ ಟಾಸ್ಕ್ನ್ನು ಪ್ರಿಯಾಂಕಾ ಗಾಂಧಿ ನೀಡಿದ್ದಾರೆ ಎನ್ನಲಾಗಿದೆ.
ಪ್ರಚಾರಕ್ಕೆ ನಾನು ಬರ್ತೀನಿ. ನೀವು ಮಹಿಳಾಪರ ವಿಚಾರವನ್ನ ಮಹಿಳೆಯರ ಮುಂದಿಡಿ ಎಂದು ಪ್ರಿಯಾಂಕಾ ಗಾಂಧಿ ಸೂಚಿಸಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಿಯಾಂಕಾ ಗಾಂಧಿ ಮಹಿಳಾ ಮಂತ್ರ ಜಪ ಮಾಡಿದ್ದಾರೆ ಎನ್ನಲಾಗಿದೆ.