Select Your Language

Notifications

webdunia
webdunia
webdunia
Thursday, 10 April 2025
webdunia

ವರದಕ್ಷಿಣೆ ಕಿರುಕುಳಕ್ಕೆ ಆತ್ಮಹತ್ಯೆಗೆ ಶರಣಾದ ಮಹಿಳೆ: ಪತಿ ಅರೆಸ್ಟ್

Woman Surviving Suicide For Dowry Harassment: Husband Arrest
bangalore , ಮಂಗಳವಾರ, 24 ಆಗಸ್ಟ್ 2021 (20:38 IST)
ಬೆಂಗಳೂರು: ಶೃತಿ (31) ಎನ್ನುವ ವಿವಾಹಿತ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ಸೋಮವಾರ ತಡ ರಾತ್ರಿ ಬೆಳಕಿಗೆ ಬಂದಿತ್ತು. ನೇಣು ಬಿಗಿದುಕೊಂಡು ತನ್ನ  ಪ್ರಾಣ ತೆಗೆದುಕೊಂಡಿರುವ ಕಾರಣ ವರದಕ್ಷಿಣೆ ಕಿರುಕುಳ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದರು. ಪತಿ ಮಿಥುನ್ ರೆಡ್ಡಿಯನ್ನು ತಡ ರಾತ್ರಿ ವಶಕ್ಕೆ ಪಡೆದಿದ್ದ ರಾಮಮೂರ್ತಿ ನಗರ ಪೊಲೀಸರು ಹೆಚ್ಚಿನ ತನಿಖೆ ನೆಡೆಸಿ ಇದೀಗ ಬಂಧಿಸಿದ್ದಾರೆ.
 
2014ರಲ್ಲಿ ಮಿಥುನ್ ರೆಡ್ಡಿ ಜೊತೆ ಮದುವೆಯಾಗಿದ್ದ ಮಹಿಳೆ, ಆತ ಬ್ಯಾಡ್ಮಿಂಟನ್ ತರಬೇತುದಾರನಾಗಿದ್ದ. ಇತ್ತೀಚೆಗೆ ಕುಡಿತದ ಚಟ ಕೂಡ ಅಂಟಿಸಿಕೊಂಡಿದ್ದ ಮಿಥುನ್ ಹೆಂಡತಿಯ ಜೊತೆಗೆ ಪ್ರತಿ ದಿನ ವರದಕ್ಷಿಣೆ ತರುವಂತೆ ಜಗಳ ಮಾಡುತ್ತಿದ್ದ. ದಂಪತಿಗೆ ನಾಲ್ಕುವರೆ ವರ್ಷದ ಗಂಡು ಮಗು ಇದೆ. ಸೋಮವಾರ ತಡ ರಾತ್ರಿ ಇಬ್ಬರ ಜಗಳ ವಿಕೋಪಕ್ಕೆ ತಿರುಗಿ ಶೃತಿ ನೇಣು ಬಿಗಿದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಆತ್ಮಹತ್ಯೆಗೆ ನಿಖರ ಕಾರಣ ಸಂಪೂರ್ಣ ತಿಳಿದು ಬಂದಿಲ್ಲವಾದರೂ ಮಿಥುನ್ ರೆಡ್ಡಿ ಕುಟುಂಬಸ್ಥರ ವಿರುದ್ಧ ಶೃತಿ ಕುಟುಂಬದವರು ಕಿರುಕುಳದ ಆರೋಪ ಕೂಡ ಹೊರಿಸಿದ್ದಾರೆ. ಶೃತಿಯ ಸಹೋದರನ ದೂರಿನ ಮೇರೆಗೆ ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ. ಸದ್ಯ ಮಿಥುನ್ ರೆಡ್ಡಿ ಯನ್ನು ರಾಮಮೂರ್ತಿ ನಗರ ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಿ ಬಂಧಿಸಿದ್ದಾರೆ.
 
ವರದಕ್ಷಿಣೆ ಕಿರುಕುಳಕ್ಕೆ ಆತ್ಮಹತ್ಯೆ: 
 
ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ ಗೃಹಿಣಿ ಶೃತಿ ಏಳು ವರ್ಷದ ಹಿಂದೆ ಮಿಥುನ್ ನನ್ನು ವರಿಸಿದ್ದಳು. ವರದಕ್ಷಿಣೆ ನೀಡುವಂತೆ ಗಂಡ ಮಿಥುನ್, ಅತ್ತೆ ಭಾಗ್ಯ ಹಾಗೂ ಮಾವ ಕಿರುಕುಳ ಕೂಡ ಕೊಡುತ್ತಿದ್ದರು  ಎನ್ನಲಾಗುತ್ತಿದೆ.
 
ಸದ್ಯ ಪತಿ ಮನೆಯವರೇ ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರ ಆರೋಪ ಹೊರಿಸಿದ್ದಾರೆ. ಕೊಲೆ ಮಾಡಿ‌
ನೇಣು ಹಾಕಿದ್ದಾರೆಂದು ಆರೋಪಿಸುತ್ತಿರುವ ಶೃತಿ ಕುಟುಂಬಸ್ಥರು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಓತ್ತಾಯಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಮ ಕಾರಂತ ಬಡಾವಣೆಗೆ ಬಿಡಿಎ ಕಚೇರಿಯಲ್ಲಿ ನಾಳೆಯಿಂದ ಸಹಾಯ ಕೇಂದ್ರ ಆರಂಭ