Select Your Language

Notifications

webdunia
webdunia
webdunia
webdunia

3ನೇ ಟೆಸ್ಟ್ ಗೆ ಭಾರತ ತಂಡದಲ್ಲಿ ಬದಲಾವಣೆ ಇಲ್ಲ: ಕೊಹ್ಲಿ

3ನೇ ಟೆಸ್ಟ್ ಗೆ ಭಾರತ ತಂಡದಲ್ಲಿ ಬದಲಾವಣೆ ಇಲ್ಲ: ಕೊಹ್ಲಿ
bengaluru , ಮಂಗಳವಾರ, 24 ಆಗಸ್ಟ್ 2021 (19:39 IST)
ಲಾರ್ಡ್ಸ್ ಟೆಸ್ಟ್​ ಪಂದ್ಯದ ಗೆಲುವಿನಿಂದ ಬೀಗುತ್ತಿರುವ ಭಾರತ ತಂಡ ನಾಳೆಯಿಂದ ಹೆಡಿಂಗ್ಲೆಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ನಿರ್ಧರಿಸಿದೆ.
ಹೆಡ್ಡಿಂಗ್ಲೆಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲುವಿನ ತಂಡವನ್ನು ಮುಂದುವರಿಯಲು ನಿರ್ಧರಿಸಿದ್ದು, ಇದರಿಂದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0ಯಿಂದ ಮುನ್ನಡೆ ಪಡೆಯುವ ವಿಶ್ವಾಸವಿದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದರು.
ಎರಡನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್ ನಲ್ಲಿ ಮಿಂಚಿದರೂ ಬೌಲಿಂಗ್ ನ
ಲ್ಲಿ ನಿರಾಸೆ ಮೂಡಿಸಿದ್ದರು. ಆದ್ದರಿಂದ ಆರ್.ಅಶ್ವಿನ್ ಅವರನ್ನು ಮೂರನೇ ಟೆಸ್ಟ್ ನಲ್ಲಿ ಆಡಿಸುವ ಮೂಲಕ ಮತ್ತಷ್ಟು ಹಿಡಿತ ಸಾಧಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಈ ವದಂತಿಯನ್ನು ಕೊಹ್ಲಿ ತಳ್ಳಿ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಿಎಂ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ 1 ಕೋಟಿ ಮೌಲ್ಯದ ಕಾರು ರೆಡಿ!