Publish Date: Tue, 24 Aug 2021 (18:33 IST)
Updated Date: Tue, 24 Aug 2021 (18:36 IST)
ಜೆಡಿಎಸ್ ನಲ್ಲಿ ನನಗೆ ಅಪಮಾನ ಆಗಿದೆ. ಆದ್ದರಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನಾನು ಪಕ್ಷ ತೊರೆಯುತ್ತಿರುವ ಸಂದೇಶ ತಲುಪಿಸಿದ್ದೇನೆ ಎಂದು ಮೈಸೂರು ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇವೇಗೌಡರು ನೀನು ಮರಿ ದೇವೇಗೌಡ ಎಂದು ಪ್ರಶಂಸಿಸಿದ್ದಾರೆ. ನನಗೆ ಅವರು ದೇವರ ಸಮಾನ ಅಂತನೂ ಹೇಳಿದ್ದೇನೆ. ಆದರೆ ಇತ್ತೀಚಿನ ಪರಿಸ್ಥಿತಿ ಸರಿಯಿಲ್ಲ. ಹಾಗಾಗಿ ಪಕ್ಷ ತೊರೆಯಲು ನಿರ್ಧರಿಸಿದ್ದೇನೆ ಎಂದರು.
ಈಗಾಗಲೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನನ್ನ ಜೊತೆ ಮಾತನಾಡಿದ್ದಾರೆ. ಆದರೆ ನಾನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇನ್ನೂ 12 ತಿಂಗಳು ಜೆಡಿಎಸ್ ನಲ್ಲಿಯೇ ಮುಂದುವರಿಯುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹರೀಶ್ ಗೌಡನಿಗೆ ಹುಣಸೂರಿನಲ್ಲಿ ಸ್ಪರ್ಧಿಸುವ ಅರ್ಹತೆಯಿತ್ತು. ಆದರೂ ಆರಂಭದಲ್ಲಿ ಪ್ರಜ್ವಲ್ ರೇವಣ್ಣ ಹೆಸರನ್ನು ಪ್ರಸ್ತಾಪಿಸಿದರು. ಆದರೆ ಕೊನೆಯಲ್ಲಿ ಎಚ್.ವಿಶ್ವನಾಥ್‌ರನ್ನು ತಂದು ನಿಲ್ಲಿಸಿದರು. ಆಗಲೂ ನಾನು ನನ್ನ ಪತ್ನಿ ಮಗ ಎಲ್ಲರೂ ಓಡಾಡಿ ವಿಶ್ವನಾಥ್ ರನ್ನು ಗೆಲ್ಲಿಸಿದೆವು ಎಂದು ಜಿಟಿಡಿ ವಿವರಿಸಿದರು.