Webdunia - Bharat's app for daily news and videos

Install App

ಜೈಲಿನಲ್ಲಿ ಪ್ರಜ್ವಲ್ ರೇವಣ್ಣ, ದರ್ಶನ್ ಪರಸ್ಪರ ಭೇಟಿಯಾಗಲು ಅವಕಾಶ ಸಿಗುತ್ತಾ

Krishnaveni K
ಮಂಗಳವಾರ, 25 ಜೂನ್ 2024 (10:44 IST)
Photo Credit: Instagram
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಇಬ್ಬರೂ ಒಂದೇ ಜೈಲಿನಲ್ಲಿರುವುದು ವಿಶೇಷ. ಪ್ರಜ್ವಲ್ ನನ್ನ ಸ್ನೇಹಿತ ಎಂದು ಈ ಮೊದಲು ದರ್ಶನ್ ಹೇಳಿದ್ದರು. ಇದೀಗ ಇಬ್ಬರೂ ಬೇರೆ ಬೇರೆ ಪ್ರಕರಣದಲ್ಲಿ ಜೈಲು ಕಂಬಿ ಎಣಿಸುವಂತಾಗಿದೆ. ಇಬ್ಬರ ಮೇಲೂ ಗಂಭೀರ ಆರೋಪಗಳಿವೆ. ಇಬ್ಬರೂ ಪರಸ್ಪರ ಭೇಟಿಗೆ ಅವಕಾಶವಿರುತ್ತದಾ ಎಂಬ ಕುತೂಹಲ ಕೆಲವರಲ್ಲಿರಬಹುದು.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಪ್ರಜ್ವಲ್ ರನ್ನು ಎಸ್ಐಟಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ಬಳಿಕ ಈಗ ಮತ್ತೆ ಪ್ರಜ್ವಲ್ ರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಹೀಗಾಗಿ ಪ್ರಜ್ವಲ್ ಮತ್ತೆ ನಿನ್ನೆಯಿಂದ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ರನ್ನು ಶನಿವಾರ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದ್ದು ಅವರನ್ನೂ ಪರಪ್ಪನ ಅಗ್ರಹಾರ ಜೈಲಿನಲ್ಲಿರಿಸಲಾಗಿದೆ. ಆದರೆ ಭದ್ರತೆ ದೃಷ್ಟಿಯಿಂದ ದರ್ಶನ್ ರನ್ನು ಇತರೆ ಕೈದಿಗಳು ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ. ಹೀಗಾಗಿ ಪ್ರಜ್ವಲ್ ಮತ್ತು ದರ್ಶನ್ ಒಂದೇ ಜೈಲಿನಲ್ಲಿದ್ದರೂ ಭೇಟಿಗೆ ಬಿಲ್ ಕುಲ್ ಅವಕಾಶವಿರಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿಯನ್ನು ಭೇಟಿಯಾದ ಕರ್ನಾಟಕದ ಟ್ಯಾಕ್ಸಿ ಚಾಲಕರಿಗೆ ಹೊಸ ಭರವಸೆ

ವಿದೇಶಿ ಶಕ್ತಿಗಳ ಕೈವಾಡವೂ ಅಡಗಿರುವ ಸಾಧ್ಯತೆ: ವಿಜಯೇಂದ್ರ

ಧರ್ಮಸ್ಥಳ ಬುರುಡೆ ರಹಸ್ಯ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಣ್ಣಾಮಲೈ ಕಿಡಿ

ಸಿಎಂ ಸಿದ್ದರಾಮಯ್ಯ ಅಂದು ಕಾಮನ್‌ಸೆನ್ಸ್‌ ಯೂಸ್ ಮಾಡ್ತಿದ್ರೆ, ಈ ಪರಿಸ್ಥಿತಿಯಲ್ಲ: ಆರ್‌ ಅಶೋಕ್‌

ಹೊಸ ದಿಕ್ಕಿನತ್ತ ತನಿಖೆ, ಶಿವತಾಂಡವದ ಫೋಟೋ ಹಂಚಿಕೊಂಡ ಧರ್ಮಸ್ಥಳ

ಮುಂದಿನ ಸುದ್ದಿ