Select Your Language

Notifications

webdunia
webdunia
webdunia
webdunia

ಯುವಕನ ಮೇಲೆ ಸೂರಜ್ ರೇವಣ್ಣ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯವೆಸಗಿದ್ದು ಎಲ್ಲಿ, ಯಾವಾಗ

Sooraj Revanna

Krishnaveni K

ಬೆಂಗಳೂರು , ಸೋಮವಾರ, 24 ಜೂನ್ 2024 (16:46 IST)
ಬೆಂಗಳೂರು: ಅಸ್ವಾಭಾವಿಕ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಎಚ್ ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ವಿಚಾರಣೆಗಾಗಿ ಸಿಐಡಿ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸೂರಜ್ ರೇವಣ್ಣ ಮೇಲೆ ಸಂತ್ರಸ್ತ ಯುವಕ ದೂರು ನೀಡುತ್ತಲೇ ಪೊಲೀಸರು ಅವರನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದರು. ಕೋರ್ಟ್ ಅವರಿಗೆ ನ್ಯಾಯಾಂಗ ಬಂಧನ ನೀಡಿತ್ತು. ಬಳಿಕ ವಿಚಾರಣೆಗಾಗಿ ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ 8 ದಿನಗಳ ಕಾಲ ಅವರನ್ನು ಸಿಐಡಿ ವಶಕ್ಕೊಪ್ಪಿಸಲಾಗಿದೆ.

36 ವರ್ಷದ ಸೂರಜ್ ರೇವಣ್ಣ ಈಗಾಗಲೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ಪ್ರಜ್ವಲ್ ರೇವಣ್ಣ ಅಣ್ಣ. ಇದೀಗ ಸೂರಜ್ ಜೆಡಿಎಸ್ ಪಕ್ಷದ 27 ವರ್ಷದ ಕಾರ್ಯಕರ್ತನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೊಳಗಾಗಿದ್ದಾರೆ.

ಎಂಎಲ್ಸಿಯಾಗಿರುವ ಸೂರಜ್ ರೇವಣ್ಣ ವೃತ್ತಿಯಲ್ಲಿ ವೈದ್ಯಕೀಯ ಪಡೆದವರು. ಜನರಲ್ ಸರ್ಜರಿ ವಿಭಾಗದಲ್ಲಿ ಉನ್ನತ ಪದವಿ ಪಡೆದಿದ್ದಾರೆ. ಎಚ್ ಡಿ ದೇವೇಗೌಡರ ಕುಟುಂಬದಲ್ಲಿ ರಾಜಕೀಯ ಪ್ರವೇಶಿಸಿದ ಎಂಟನೇ ವ್ಯಕ್ತಿ ಸೂರಜ್. ವೃತ್ತಿಯಲ್ಲಿ ವೈದ್ಯರಾಗಿದ್ದರೂ ರಾಜಕೀಯದಲ್ಲಿ ಆಸಕ್ತಿಯಿದ್ದರಿಂದ ಹೊಳೆನರಸೀಪುರದಲ್ಲಿ ಸ್ಥಳೀಯ ಮಟ್ಟದಲ್ಲಿ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು. 2019 ರ ಲೋಕಸಭೆ ಚುನಾವಣೆ ವೇಳೆ ಸಹೋದರ ಪ್ರಜ್ವಲ್ ಗೆಲುವಿಗಾಗಿ ಶ್ರಮಿಸಿದ್ದರು.

2021 ರಲ್ಲಿ ಸೂರಜ್ ಮೊದಲ ಬಾರಿಗೆ ಎಂಎಲ್ಸಿಯಾಗಿ ಆಯ್ಕೆಯಾದರು. 2018 ರಲ್ಲಿ ಸೂರಜ್ ವಿವಾಹವಾಗಿದ್ದರು. ಆದರೆ 2021 ರ ಎಂಎಲ್ ಸಿ ಚುನಾವಣೆ ಅಫಿಡವಿಟ್ ನಲ್ಲಿ ಈ ವಿಚಾರವನ್ನು ಹೇಳದೇ ವಿವಾದಕ್ಕೆ ಸಿಲುಕಿದ್ದರು. ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.

ಯುವಕನ ಮೇಲೆ ಲೈಂಗಿಕ ದೌರ್ಜನ್ಯ
ಅತ್ತ ತಮ್ಮ ಪ್ರಜ್ವಲ್ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸಿದರೆ ಇತ್ತ ಅಣ್ಣ ಯುವಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕೊಳಗಾಗಿದ್ದಾರೆ. ಸಂತ್ರಸ್ತ ಯುವಕನ ಹೇಳಿಕೆ ಪ್ರಕಾರ ಇದು ನಡೆದಿದ್ದು ಜೂನ್ 16 ರಂದು.  ಹೊಳೆನರಸೀಪುರದ ತಮ್ಮ ಫಾರ್ಮ್ ಹೌಸ್ ನಲ್ಲಿ ಸೂರಜ್ ಕೃತ್ಯವೆಸಗಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ. ಈ ಸಂಬಂಧ ಸೂರಜ್ ಮೇಲೆ ಯವಕ ನೀಡಿದ ದೂರಿನಂತೆ ಈಗ ಕ್ರಮ ಕೈಗೊಳ್ಳಲಾಗಿದ್ದು, ಸೂರಜ್ ನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಹಿಂದೆ ಪ್ರಜ್ವಲ್ ರೇವಣ್ಣನೂ ಪರಪ್ಪನ ಅಗ್ರಹಾರಕ್ಕೆ: ಎಲ್ಲಾ ವಿಐಪಿಗಳು ಈಗ ಒಂದೇ ಕಡೆ