Select Your Language

Notifications

webdunia
webdunia
webdunia
webdunia

ಕರ್ನಾಟಕ ಬಂದ್ ದಿನ ಬೆಂಗಳೂರಿನ ಶಾಲೆಗಳಿಗೆ ರಜೆಯಿರುತ್ತಾ, ಇಲ್ಲಿದೆ ಉತ್ತರ

Karnataka Bandh
ಬೆಂಗಳೂರು: ಗುರುವಾರ ನಡೆಯಲಿರುವ ಕರ್ನಾಟಕ ಬಂದ್ ದಿನ ಬೆಂಗಳೂರಿನ ಖಾಸಗಿ ಶಾಲೆಗಳಿಗೆ ರಜೆಯಿರುತ್ತಾ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕನ್ನಡ ಸಂಘಟನೆಗಳು ಆಗಸ್ಟ್ 13 ರಂದು ಕರ್ನಾಟಕ ಬಂದ್ ಗೆ ಕನ್ನಡ ಸಂಘಟನೆಗಳು ಕರೆ ನೀಡಿವೆ. ಇದಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಕೇವಲ ನೈತಿಕ ಬೆಂಬಲ ನೀಡಲು ಘೋಷಿಸಿವೆ.

ಕರ್ನಾಟಕ ಬಂದ್ ಬಗ್ಗೆ ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್ ಸ್ಪಷ್ಟನೆ ನೀಡಿದ್ದು ಬೆಂಗಳೂರಿನಲ್ಲಿ ಶಾಲೆಗಳಿಗೆ ರಜೆ ಇರಲ್ಲ ಎಂದಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆ ನೀಡುವುದಿಲ್ಲ. ಬದಲಾಗಿ ನೈತಿಕ ಬೆಂಬಲ ನೀಡಲಿದ್ದೇವೆ ಎಂದಿದೆ. ಆ ದಿನ ಶಿಕ್ಷಕರು, ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡಲಿದ್ದಾರೆ. ಆದರೆ ಸದ್ಯಕ್ಕೆ ಶಾಲೆಗಳಿಗೆ ರಜೆ ನೀಡುವ ಇರಾದೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಕರ್ನಾಟಕ ಬಂದ್ ಗೆ ಬೆಂಬಲ ನೀಡುವಂತೆ ವಿವಿಧ ಸಂಘಟನೆಗಳ ಬೆಂಬಲ ನೀಡುವಂತೆ ಕನ್ನಡ ಸಂಘಟನೆಗಳು ಕರೆ ನೀಡಿವೆ. ಆದರೆ ಕೆಲವು ಸಂಘಟನೆಗಳು ಇನ್ನೂ ಬೆಂಬಲ ಘೋಷಿಸಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಗೂಂಡಾಗಿರಿ ಸರಕಾರ- ಆರ್.ಅಶೋಕ್