Publish Date: Thu, 02 Jun 2022 (14:16 IST)
Updated Date: Thu, 02 Jun 2022 (14:18 IST)
ಬೆಳಗಾವಿ : ಹೆಂಡತಿ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರ ಹತ್ಯೆಗೈದಿರುವ ಘಟನೆ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ನಿವಾಸಿ ದುಂಡಯ್ಯಾ ನಂದಿಕೊಳ್ಳಮಠ (42) ಕೊಲೆಯಾದ ವ್ಯಕ್ತಿ.
ದುಂಡಯ್ಯಾ ನಂದಿಕೊಳ್ಳಮಠ ಅವರು ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿದ ಹೆಂಡತಿ ಮನೆಗೆ ಬಂದಿದ್ದರಂತೆ,
ಈ ವೇಳೆ ತಡರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ತಲೆಯ ಭಾಗಕ್ಕೆ ಹಲ್ಲೆಗೈದು ಕೊಂದು ಪರಾರಿಯಾಗಿದ್ದಾರೆ.