Select Your Language

Notifications

webdunia
webdunia
webdunia
webdunia

ಪತಿಯ ಕಾಮದ ಚಪಲಕ್ಕೆ ಪತ್ನಿಗೆ ಬೆಂಕಿ ಇಡೋದಾ

ಪತಿಯ ಕಾಮದ ಚಪಲಕ್ಕೆ ಪತ್ನಿಗೆ ಬೆಂಕಿ ಇಡೋದಾ
ಭುವನೇಶ್ವರ , ಶನಿವಾರ, 29 ಫೆಬ್ರವರಿ 2020 (20:00 IST)

ಮದುವೆಯಾಗಿ ಹೆಂಡತಿಯಿದ್ದರೂ ಕಾಮದ ಚಪಲಕ್ಕೆ ಬಿದ್ದಿದ್ದ ಪತಿಯೊಬ್ಬ ಬೇರೊಬ್ಬಳ ಜೊತೆಗಿನ ಅಕ್ರಮ ಸಂಬಂಧದಿಂದಾಗಿ ಪತ್ನಿಗೆ ಬೆಂಕಿ ಹಚ್ಚಿದ್ದಾನೆ.
 

ಪತಿ ಹಾಗೂ ಪತ್ನಿ ಅನ್ಯೋನ್ಯವಾಗಿದ್ದರು. ಇವರ ನಡುವೆ ಬಂದವಳೇ ಒಬ್ಬಳು. ಅವಳ ಜೊತೆಗೆ ಪತಿ ಅಕ್ರಮ ಸಂಬಂಧ ಹೊಂದಿದ್ದನು. ಈ ವಿಷಯ ಪತ್ನಿಗೂ ಗೊತ್ತಾಗಿದೆ.

ಅಕ್ರಮ ಹಾಗೂ ಅನೈತಿಕ ಸಂಬಂಧ ನಿಲ್ಲಿಸುವಂತೆ ಪತ್ನಿ ತನ್ನ ಪತಿಗೆ ಹೇಳುತ್ತಲೇ ಬಂದಿದ್ದಾಳೆ. ಆದರೆ ಇದಕ್ಕೆ ಒಪ್ಪದ ಪತಿರಾಯ ತನ್ನ ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ.

ಬೆಂಕಿಯಿಂದ ಸುಟ್ಟು ಕಲಕಲಾಗುತ್ತಿದ್ದ ಪತ್ನಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದು, ಆಕೆ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಓಡಿಸ್ಸಾದ ಜಾಜ್ ಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಪರಾರಿಯಾಗಿರೋ ಪತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಾರ್ಚ್ 4 ರಿಂದ ಪಿ.ಯು.ಸಿ. ವಾರ್ಷಿಕ ಪರೀಕ್ಷೆ: ಡಿಸಿ ನೀಡಿದ್ರು ಖಡಕ್ ಎಚ್ಚರಿಕೆ