Webdunia - Bharat's app for daily news and videos

Install App

ಪ್ರಿಯಕರನಿಗಾಗಿ ಪತಿಗೆ ಸ್ಲೋ ಪಾಯ್ಸನ್ ನೀಡಿ ಕತೆ ಮುಗಿಸಿದ ಪತ್ನಿಯ ಖತರ್ನಾಕ್ ಕೃತ್ಯ ಬಯಲು

Krishnaveni K
ಶುಕ್ರವಾರ, 25 ಅಕ್ಟೋಬರ್ 2024 (12:31 IST)
ಉಡುಪಿ: ಪ್ರಿಯಕರನಿಗಾಗಿ ಪತಿಗೆ ಸ್ಲೋ ಪಾಯ್ಸನ್ ನೀಡಿ ಪತ್ನಿಯೇ ಹತ್ಯೆ ಮಾಡಿದ ಘಟನೆ ಉಡುಪಿಯ ಅಜೆಕ್ಕಾರಿನಲ್ಲಿ ನಡೆದಿದೆ. ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.

ಪತ್ನಿ ಪ್ರತಿಮಾ ಮತ್ತು ಪ್ರಿಯಕರ ದಿಲೀಪ್ ಹೆಗ್ಡೆ ಎಂಬವರನ್ನು ಈಗ ಬಂಧಿಸಲಾಗಿದೆ. ಪ್ರಿಯಕರ ದಿಲೀಪ್ ಜೊತೆ ಸೇರಿಕೊಂಡು ಪ್ರತಿಮಾ ಪತಿ ಬಾಲಕೃಷ್ಣ ಅವರನ್ನು ಸ್ಲೋ ಪಾಯ್ಸನ್ ನೀಡಿ ಕೊಲೆ ಮಾಡಿದ್ದಾಳೆ. ಸ್ಲೋ ಪಾಯ್ಸನ್ ನೀಡಿದ್ದರಿಂದ ಕಳೆದ ಎರಡು ವಾರಗಳಿಂದ ಬಾಲಕೃಷ್ಣ ಅಸ್ವಸ್ಥರಾಗಿದ್ದರು.

ಬಾಲಕೃಷ್ಣ ತೀವ್ರ ವಾಕರಿಕೆ, ಜ್ವರ ಮುಂತಾದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಣಿಪಾಲ್, ನಿಮ್ಹಾನ್ಸ್ ಸೇರಿದಂತೆ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿರಲಿಲ್ಲ. ಕೊನೆಗೆ ಬಾಲಕೃಷ್ಠ ಅವರನ್ನು ಮನೆಗೆ ಕರೆತರಲಾಗಿತ್ತು. ಆದರೆ ಅಕ್ಟೋಬರ್ 20 ರ ತಡರಾತ್ರಿ ಬಾಲಕೃಷ್ಣ ಉಸಿರುಗಟ್ಟಿಸಿ ಪ್ರತಿಮಾ, ದಿಲೀಪ್ ಸೇರಿಕೊಂಡು ಹತ್ಯೆ ಮಾಡಿದ್ದರು.

 ಬಳಿಕ ಸಂಶಯಗೊಂಡ ಬಾಲಕೃಷ್ಣ ಮನೆಯವರು ಪ್ರತಿಮಾ ವಿರುದ್ಧ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿದಾಗ ಪತ್ನಿಯೇ ಪ್ರಿಯಕರನ ಜೊತೆ ಸೇರಿಕೊಂಡು ಹತ್ಯೆ ಮಾಡಿರುವ ವಿಚಾರ ಬೆಳಕಿಗೆ ಬಂದಿತ್ತು. ಇದೀಗ ಇಬ್ಬರನ್ನೂ ಖಾಕಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೆಲಿಕಾಫ್ಟರ್‌ ಪತನ: ಇಬ್ಬರು ಸಚಿವರು ಸೇರಿದಂತೆ 8ಮಂದಿ ದುರ್ಮರಣ

ಧರ್ಮಸ್ಥಳ, ಇಂದು 13ನೇ ಪಾಯಿಂಟ್ ಉತ್ಖನನ ಮಾಡದಿರುವುದರ ಹಿಂದಿದೆ ಕಾರಣ

ಮಹದೇವಪುರ ಕ್ಷೇತ್ರದಲ್ಲಿ 1ಲಕ್ಷ ಮತಗಳ್ಳತನ, ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ರಾಹುಲ್ ಗಾಂಧಿ

ಬೆಂಗಳೂರಿನಲ್ಲಿ ದೆಹಲಿ ನಂತರದ ದೊಡ್ಡ ಮೆಟ್ರೊ ಸಂಚಾರ ಜಾಲ: ತೇಜಸ್ವಿ ಸೂರ್ಯ

ಮಹದೇವಪುರ ಕ್ಷೇತ್ರದಲ್ಲಿ ಎಷ್ಟು ನಕಲಿ ಮತದಾರರಿದ್ದರು: ದಾಖಲೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ

ಮುಂದಿನ ಸುದ್ದಿ
Show comments