Select Your Language

Notifications

webdunia
webdunia
webdunia
webdunia

ಸಂಸ್ಕೃತ ಕಲಿಯದಿದ್ದರೆ ಸತ್ತ ಮೇಲೆ ಸ್ವರ್ಗಕ್ಕೆ ಟಿಕೆಟ್ ಸಿಗಲ್ಲ: ಪುತ್ತಿಗೆ ಶ್ರೀಗಳ ವಿವಾದಿತ ಹೇಳಿಕೆ

Puttige seer

Krishnaveni K

ಉಡುಪಿ , ಸೋಮವಾರ, 2 ಸೆಪ್ಟಂಬರ್ 2024 (13:53 IST)
ಉಡುಪಿ: ಶ್ರೀಕಷ್ಣಾಷ್ಠಮಿ ಕಾರ್ಯಕ್ರಮದ ಭಾಷಣದಲ್ಲಿ ಸಂಸ್ಕೃತ ಕಲಿಯದಿದ್ದರೆ ಸತ್ತ ಮೇಲೆ ಸ್ವರ್ಗಕ್ಕೆ ಟಿಕೆಟ್ ಸಿಗ ಲ್ಲ ಎಂದಿರುವ ಪುತ್ತಿಗೆ ಶ್ರೀಗಳ ಹೇಳಿಕೆ ಈಗ ಭಾರೀ  ವಿವಾದಕ್ಕೆ ಕಾರಣವಾಗಿದೆ.

ಪುತ್ತಿಗೆ ಶ್ರೀಗಳ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸಂಸ್ಕೃತ ಎಲ್ಲಾ ಭಾಷೆಗಳ ತಾಯಿ, ಉಳಿದೆಲ್ಲಾ ಭಾಷೆಗಳು ಪ್ರಾದೇಶಿಕ ಭಾಷೆಗಳು. ಸಂಸ್ಕೃತ ದೇವನಗರಿ ಭಾಷೆ. ಸ್ವರ್ಗ ಲೋಕಕ್ಕೆ ಹೋಗಬೇಕಾದರೆ ಸಂಸ್ಕೃತ ಕಲಿಯಬೇಕು ಎಂದು ಪುತ್ತಿಗೆ ಶ್ರೀಗಳು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಸಂಸ್ಕೃತ ಶ್ರೇಷ್ಠ ಮತ್ತು ಪಾವನ ಭಾಷೆ. ದೇವರ ಎಲ್ಲಾ ಶ್ಲೋಕಗಳು ಸಂಸ್ಕೃತದಲ್ಲಿ ಇವೆ. ಇದು ಪರಲೋಕದ ಭಾಷೆಯೂ ಹೌದು. ಹೀಗಾಗಿ ನಾವು ಸತ್ತ ಮೇಲೆ ಪರಲೋಕಕ್ಕೆ ಹೋಗಬೇಕಾದರೆ ಸಂಸ್ಕೃತ ಕಲಿಯಬೇಕು ಎಂದಿದ್ದರು. ಉಳಿದಂತೆ ತುಳು, ಕನ್ನಡ, ಮಲಯಾಳಂ, ಹಿಂದಿ, ತಮಿಳು, ತೆಲುಗು ಭಾಷೆಗಳು ಹುಟ್ಟಿಕೊಂಡಿರುವುದೇ ಸಂಸ್ಕೃತದಿಂದ. ಆಂಗ್ಲ ಭಾಷೆಗೂ ಸಂಸ್ಕೃತವೇ ಮೂಲ.

ಸಂಸ್ಕೃತ ಅಂತರ್ಲೋಕೀಯ ಭಾಷೆ. ಸಂಸ್ಕೃತ ಭಾಷೆ ತಿಳಿಯದಿದ್ದರೆ ದೇವಲೋಕಕ್ಕೆ ವೀಸಾ ಸಿಗುವುದಿಲಲ್ಲ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ಪುತ್ತಿಗೆ ಶ್ರೀಗಳು ಹೇಳಿದ್ದು ಸರಿಯಾಗಿದೆ. ಅವರ ಹೇಳಿಕೆಯನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂದಿದ್ದಾರೆ. ಮತ್ತೆ ಕೆಲವರು ದೇವರಿಗೆ ಯಾವ ಭಾಷೆಯೂ ಅನ್ವಯವಾಗುವುದಿಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಡಾ ಸಂಕಷ್ಟದ ಬೆನ್ನಲ್ಲೇ ಚಾಮುಂಡಿ ತಾಯಿಯ ಮೊರೆ ಹೋಗಲಿರುವ ಸಿದ್ದರಾಮಯ್ಯ