ಜಗಳವಾಡಿದ ಗಂಡನ ಕತ್ತು ಹಿಸುಕಿ ಕೊಂದ ಹೆಂಡತಿ

Webdunia
ಗುರುವಾರ, 13 ಜನವರಿ 2022 (20:22 IST)
ಶೇಖ್ ಕುಡಿದು ಮನೆಗೆ ಬರುವುದನ್ನು ಫರ್ಜಾನಾ ಯಾವಾಗಲೂ ವಿರೋಧಿಸುತ್ತಿದ್ದಳು. ಫರ್ಜಾನಾಳಿಗೆ ಶೇಖ್ ಎರಡನೇ ಪತಿಯಾಗಿದ್ದು, ಇವರಿಬ್ಬರಿಗೂ ಒಂದು ಮಗುವಿದೆ.ಹೈದರಾಬಾದ್: ಮಹಿಳೆಯೊಬ್ಬರು ಗಂಡನ ಜೊತೆ ಜಗಳವಾಡಿದ ನಂತರ ಆ ಜಗಳ ವಿಕೋಪಕ್ಕೆ ಹೋಗಿದ್ದು, ಕೋಪದಿಂದ ಹೆಂಡತಿ ತನ್ನ ಗಂಡನನ್ನು ಕೊಲೆ ಮಾಡಿರುವ ಪತಿಯನ್ನು ಕೊಂದಿರುವ ಆಘಾತಕಾರಿ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ರಾತ್ರಿ ಕಾಮರೆಡ್ಡಿ ಜಿಲ್ಲೆಯ ಅಜ್ಜಂಪುರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
 
ಹೆಂಡತಿಯಿಂದ ಹತ್ಯೆಗೀಡಾದ ವ್ಯಕ್ತಿಯನ್ನು 35 ವರ್ಷದ ಶೇಖ್ ಅಫ್ರೋಜ್ ಎಂದು ಗುರುತಿಸಲಾಗಿದೆ. ಅವರು ಸಣ್ಣ ವ್ಯಾಪಾರ ಮಾಡುತ್ತಿದ್ದರು. ಗಂಡನೊಂದಿಗೆ ಜಗಳವಾಡಿದ ಆರೋಪಿ ಫರ್ಜಾನಾ ಬೇಗಂ ಬಟ್ಟೆಯಿಂದ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.ಕೊಲೆಗೆ ಸಂಬಂಧಿಸಿದಂತೆ ಶೇಖ್ ಅವರ ಸಹೋದರ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಫರ್ಜಾನಾ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.
 
ಈ ದಂಪತಿ ನಡುವೆ ಬಹಳ ದಿನಗಳಿಂದ ಭಿನ್ನಾಭಿಪ್ರಾಯವಿತ್ತು ಎಂದು ಶೇಖ್ ಅವರ ಸಹೋದರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಇದೇ ಕಾರಣಕ್ಕೆ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಶೇಖ್ ಕುಡಿದು ಮನೆಗೆ ಬರುವುದನ್ನು ಫರ್ಜಾನಾ ಯಾವಾಗಲೂ ವಿರೋಧಿಸುತ್ತಿದ್ದಳು ಎನ್ನಲಾಗಿದೆ. ಫರ್ಜಾನಾಳಿಗೆ ಶೇಖ್ ಎರಡನೇ ಪತಿಯಾಗಿದ್ದು, ಇವರಿಬ್ಬರಿಗೂ ಒಂದು ಮಗುವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು: ಇಲ್ಲಿನ ಥಿಯೇಟರ್‌ನಲ್ಲಿ ಮಹಿಳಾ ಟಾಯ್ಲೆಟ್‌ನಲ್ಲಿ ಘಟನೆ ಕೇಳಿದ್ರೆ ಬೆಚ್ಚಿಬೀಳ್ತಿರಾ

ಜನರ ಆಶೀರ್ವಾದದಿಂದ ದೇವರಾಜ ಅರಸರ ದಾಖಲೆ ಮುರಿದಿದ್ದೇನೆ: ಸಿಎಂ ಸಿದ್ದರಾಮಯ್ಯ

ಪ್ರಧಾನಿ ಮೋದಿ ಜತೆ ಯುಪಿ ಸಿಎಂ ಯೋಗಿ ಮಾತುಕತೆ

ಪೆರೋಲ್‌ನಲ್ಲಿ ಹೊರಬರುತ್ತಿರುವ ಗುರ್ಮೀತ್ ರಾಮ್ ಮೇಲಿದೆ ಹಲವು ವಿವಾದಗಳು

ಶಿಷ್ಯರ ಮೇಲಿನ ರೇಪ್ ಕೇಸ್‌, 15ನೇ ಬಾರಿಗೆ ರಾಮ್ ರಹೀಂಗೆ ಮತ್ತೇ ಬಿಡುಗಡೆ ಭಾಗ್ಯ

ಮುಂದಿನ ಸುದ್ದಿ
Show comments