Select Your Language

Notifications

webdunia
webdunia
webdunia
webdunia

ಅಕ್ಕನ‌ ಸಂಸಾರ ಸರಿ‌ ಮಾಡಲು ದರೋಡೆ ಸ್ಕೆಚ್- ಹೈಡ್ರಾಮಾ ಮಾಡಿದ ಕಿಲಾಡಿ ಅರೆಸ್ಟ್

ಅಕ್ಕನ‌ ಸಂಸಾರ ಸರಿ‌ ಮಾಡಲು ದರೋಡೆ ಸ್ಕೆಚ್- ಹೈಡ್ರಾಮಾ ಮಾಡಿದ ಕಿಲಾಡಿ ಅರೆಸ್ಟ್
bangalore , ಗುರುವಾರ, 13 ಜನವರಿ 2022 (20:14 IST)
ತನ್ನ ಅಕ್ಕನ ಸಂಸಾರ ಸರಿಮಾಡಲು ಕಷ್ಟಕ್ಕಾಗಿ ಹಣ ಬೇಕಿತ್ತು. ಬಾಸ್ ಬಳಿ ಹಣ ಕೇಳಿದ್ರೆ ಕೊಡಲಿಲ್ಲ. ಹೀಗಾಗಿ ರಾಬರಿ ನಾಟಕ ಮಾಡಿ ಹಣ ಹೊಡೆಯಲು ಪ್ಲಾನ್ ಮಾಡಿದೆ. ಅದ್ರಂತೆ ಕಚೇರಿಯಿಂದ 8 ಲಕ್ಷ ಹಣ ತಗೊಂಡು ಹೊರಟವನು ಮನೆಗೆ ಹೋಗಿ 4 ಲಕ್ಷ ಇಟ್ಟು, ಉಳಿದ ನಾಲ್ಕು ಲಕ್ಷವನ್ನ ಕಚೇರಿಗೆ ಕಟ್ಟಿದ್ದ. ಬಳಿಕ ದರೋಡೆ ಕಥೆ ಹೇಳಿದ್ದ.ಬೆಂಗಳೂರು: ಆತನಿಗೆ ಹಣದ ಅವಶ್ಯಕತೆಯೇನೋ ಇತ್ತು.. ಆದರೆ ಅವನು ದುಡ್ಡು ಸಂಗ್ರಹಿಸಲು ಐಡಿಯಾ ಕೇಳಿದ್ರೆ ಎಂತವರೂ ಅಚ್ಚರಿಗೊಳಗಾಗುತ್ತಾರೆ. ತಾನೇ ಹಣ ಕದ್ದು ಪೊಲೀಸರಿಗೆ ದೂರು ನೀಡಿದ್ದ ಭೂಪ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
 
ಅರುಣ್ ಕುಮಾರ್.. ಜೆ.ಪಿ ನಗರದ ನಿವಾಸಿ. ಶಿವಾಜಿನಗರದ ಅಟ್ಟಿಕಾಗೋಲ್ಡ್ನಲ್ಲಿ‌ ಕಳೆದ 6 ತಿಂಗಳಿಂದ ಕೆಲಸ‌ ಮಾಡ್ತಿದ್ದ. ಹಣವನ್ನು ಬೇರೆ ಬೇರೆ ಬ್ರಾಂಚ್ಗೆ ತಲುಪಿಸೋ ಕೆಲಸ ಈತನದ್ದು. ಅದರಂತೆ ಅರುಣ್ ಕೇಂದ್ರ ಕಚೇರಿಯಿಂದ 8 ಲಕ್ಷ ಹಣ ಪಡೆದು ಅಲ್ಲಿಂದ ಹೊರಟಿದ್ದ. ಅದ್ರಂತೆ ನಾಯಂಡಹಳ್ಳಿ ಬ್ರಾಂಚ್ಗೆ 4 ಲಕ್ಷ ಹಣ ಕಟ್ಟಿ ಮೆಟ್ರೋ ನಿಲ್ದಾಣದ ಬಳಿಯ ಫ್ಲೈಓವರ್ ಹತ್ತಿರ ಬಂದಿದ್ದ. ಅಷ್ಟೇ.. ಆಮೇಲೆ ಅಯ್ಯಯ್ಯೋ ಖಾರದಪುಡಿ ಎರಚಿ 4 ಲಕ್ಷ ಹಣ ದರೋಡೆ ಮಾಡ್ಬಿಟ್ರು ಅಂತಾ 112ಗೆ ಕರೆ ಮಾಡಿದ್ದ. ಬ್ಯಾಟರಾಯನಪುರ ಪೊಲೀಸ್ರು ಕೂಡ ಗಾಬರಿಯಾಗಿ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ್ರು. ಆದ್ರೆ ತನಿಖೆ ವೇಳೆ ಬಯಲಾಗಿದ್ದೇ ಬೇರೆ.ಬೆಳಗ್ಗೆ ಕಂಪ್ಲೇಂಟ್ ಕೊಟ್ಟವನೇ ಸಂಜೆ ಅರೆಸ್ಟ್
ಅಷ್ಟಕ್ಕೂ ಇಲ್ಲಿ ರಾಬರಿ ಕಥೆ ಹೇಳಿದ್ದ ಅರುಣ್ನೇ ಈ ಸ್ಟೋರಿಯ ಖಳನಾಯಕ. ತನ್ನ ಅಕ್ಕನ ಸಂಸಾರ ಸರಿ‌ಮಾಡಲು ಕಷ್ಟಕ್ಕಾಗಿ ಹಣ ಬೇಕಿತ್ತು. ಬಾಸ್ ಬಳಿ‌ ಹಣ ಕೇಳಿದ್ರೆ ಕೊಡಲಿಲ್ಲ. ಹೀಗಾಗಿ ರಾಬರಿ ನಾಟಕ‌ಮಾಡಿ‌ ಹಣ ಹೊಡೆಯಲು ಪ್ಲಾನ್ ಮಾಡಿದ್ದ. ಅದ್ರಂತೆ ಕಚೇರಿಯಿಂದ 8 ಲಕ್ಷ ಹಣ ತಗೊಂಡು ಹೊರಟವನು ಮನೆಗೆ ಹೋಗಿ 4 ಲಕ್ಷ ಇಟ್ಟು, ಉಳಿದ ನಾಲ್ಕು ಲಕ್ಷವನ್ನ ಕಚೇರಿಗೆ ಕಟ್ಟಿದ್ದ. ಬಳಿಕ ದರೋಡೆ ಕಥೆ ಹೇಳಿದ್ದ.
 
ಸದ್ಯ ಬ್ಯಾಟನಪುರ ಪೊಲೀಸರು ಅರುಣ್ ಕುಮಾರ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅದೇನೇ ಇರಲಿ ತನ್ನನ್ನು ತೀರಿಸಿಕೊಳ್ಳಲು ಕಳ್ಳತನದ ಹಾದಿ ತುಳಿದವ ಮನೆಯವರಿಗೆ ಮತ್ತಷ್ಟು ಕಷ್ಟ ನೀಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಯರೇ ಎಚ್ಚರ- ಮಾಡೆಲ್ ಮಾಡುವ ನೆಪದಲ್ಲಿ ಖಾಸಗಿ ಫೋಟೋಗೆ ಡಿಮ್ಯಾಂಡ್