Select Your Language

Notifications

webdunia
webdunia
webdunia
webdunia

ಗಂಡ ಹೋಟೆಲ್ ಗೆ ಕರೆದುಕೊಂಡು ಹೋಗದಿದ್ದಕ್ಕೆ ಹೆಂಡತಿ ಆತ್ಮಹತ್ಯೆ

ಗಂಡ ಹೋಟೆಲ್ ಗೆ ಕರೆದುಕೊಂಡು ಹೋಗದಿದ್ದಕ್ಕೆ ಹೆಂಡತಿ ಆತ್ಮಹತ್ಯೆ
ಚಿಕ್ಕಬಳ್ಳಾಪುರ , ಶುಕ್ರವಾರ, 7 ಜನವರಿ 2022 (09:58 IST)
ಚಿಕ್ಕಬಳ್ಳಾಪುರ: ಗಂಡ ಹೊರಗಡೆ ಹೋಟೆಲ್ ಗೆ ಊಟ ಕರೆದುಕೊಂಡು ಹೋಗಲ್ಲ ಎಂದು ಕಂಪ್ಲೇಂಟ್ ಮಾಡುವ ಹೆಂಡತಿಯರಿರುತ್ತಾರೆ. ಆದರೆ ಈ ಮಹಿಳೆಯಂತೂ ಈ ಕಾರಣಕ್ಕೆ ಮಕ್ಕಳೊಂದಿಗೆ ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದಾಳೆ!

ಚಿಕ್ಕಮಗಳೂರಿನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. 24 ವರ್ಷದ ಮಹಿಳೆ ತನ್ನ 4 ಮತ್ತು ಒಂದೂವರೆ ವರ್ಷದ ಮಕ್ಕಳೊಂದಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ವೇಳೆ ನೆರೆಹೊರೆಯವರು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೂವರೂ ಸಾವನ್ನಪ್ಪಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಗಂಡ ಹೋಟೆಲ್ ಗೆ ಕರೆದೊಯ್ಯುತ್ತಿಲ್ಲ ಎಂಬ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿತ್ತಂತೆ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀಕೆಂಡ್ ಕರ್ಫ್ಯೂಗೆ ಯಾವ ಸೇವೆಗಳಿಗೆ ಕಡಿವಾಣ?