Publish Date: Mon, 14 May 2018 (10:25 IST)
Updated Date: Mon, 14 May 2018 (10:26 IST)
ಬೆಂಗಳೂರು: ರಾಜಕೀಯ ಜೀವನ ಸಾಕು. ಇನ್ನು ಮಕ್ಕಳಿಗೆ ರಾಜಕಾರಣ ಬಿಟ್ಟುಕೊಡೋಣ ಅಂತಿದ್ದ ಸಿಎಂ ಸಿದ್ದರಾಮಯ್ಯ ಈ ಚುನಾವಣೆಗೆ ಸ್ಪರ್ಧಿಸಲು ಕಾರಣವೇನೆಂದು ಗುಟ್ಟು ಬಿಟ್ಟುಕೊಟ್ಟಿದ್ದಾರೆ.
ಇದು ನನ್ನ ಕೊನೆಯ ಚುನಾವಣೆ ಎನ್ನುತ್ತಲೇ ಈ ಬಾರಿ ಚುನಾವಣೆ ಕಣಕ್ಕಿಳಿದಿದ್ದ ಸಿದ್ದರಾಮಯ್ಯ, ಅದರ ಹಿಂದಿನ ಕಾರಣವನ್ನೂ ವಿವರಿಸಿದ್ದಾರೆ. ಹಾಗೆಯೇ ಇನ್ನು ಮುಂದೆ ಆ ಬ್ರಹ್ಮನೇ ಬಂದು ಹೇಳಿದರೂ ಚುನಾವಣೆಗೆ ಸ್ಪರ್ಧಿಸಲ್ಲ ಎಂದೂ ಶಪಥ ಮಾಡಿದ್ದಾರೆ.
‘ಈ ಬಾರಿಯೇ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದುಕೊಂಡಿದ್ದೆ. ಆದರೆ ಮುಖ್ಯಮಂತ್ರಿಯಾಗಿ ಚುನಾವಣೆಗೆ ಸ್ಪರ್ಧಿಸದೇ ಇದ್ದರೆ ಪಲಾಯನ ಮಾಡಿದಂತಾಗುತ್ತದೆ ಎಂದು ಸ್ಪರ್ಧಿಸಲು ನಿರ್ಧರಿಸಿದೆ. ಆದರೆ ಇದೇ ನನ್ನ ಕೊನೆಯ ಚುನಾವಣೆ’ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.