Publish Date: Mon, 14 May 2018 (10:13 IST)
Updated Date: Mon, 14 May 2018 (10:14 IST)
ಬೆಂಗಳೂರು: ರಾಜ್ಯದ ಮೂರು ಕಡೆಗಳಲ್ಲಿ ಇಂದು ಮತ್ತೆ ಚುನಾವಣೆ ನಡೆಯಲಿದೆ. ಮತಯಂತ್ರಗಳ ದೋಷ ಮತ್ತು ಮತಗಟ್ಟೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಇಂದು ಮರುಮತದಾನ ನಡೆಯುತ್ತಿದೆ.
ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಲೊಟ್ಟಗೊಳ್ಳಹಳ್ಳಿ, ಕೊಪ್ಪಳ ಜಿಲ್ಲೆಯ ಕುಷ್ಠಗಿ ವಿಧಾನಸಭಾ ಕ್ಷೇತ್ರದ ಎರಡು ಮತಗಟ್ಟೆಯಲ್ಲಿ ಇಂದು ಮರು ಮತದಾನ ನಡೆಯುತ್ತಿದೆ.
ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಈ ವ್ಯಾಪ್ತಿಗೆ ಬರುವ ಎಲ್ಲಾ ಕಚೇರಿಗಳು, ಶಾಲೆ, ಬ್ಯಾಂಕ್ ಗಳು ಮತ್ತಿತರ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.