ಈದ್ ಮಿಲಾದ್ ಪ್ರಾರ್ಥನೆಗೆ ಎಂದಿನಂತೆ ಸಿಎಂ ಸಿದ್ದರಾಮಯ್ಯ ಯಾಕೆ ಬರ್ಲಿಲ್ಲ: ಜಮೀರ್ ಹೇಳಿದ್ರು ಕಾರಣ

Krishnaveni K
ಸೋಮವಾರ, 31 ಮಾರ್ಚ್ 2025 (14:58 IST)
ಬೆಂಗಳೂರು: ಪ್ರತೀ ವರ್ಷವೂ ಸಿಎಂ ಸಿದ್ದರಾಮಯ್ಯ ಮುಸ್ಲಿಂ ಬಾಂಧವರೊಂದಿಗೆ ಈದ್ ಮಿಲಾದ್ ಪ್ರಾರ್ಥನೆಯಲ್ಲಿ ಭಾಗಿಯಾಗುತ್ತಾರೆ. ಆದರೆ ಈ ಬಾರಿ ಅವರು ಭಾಗಿಯಾಗಿಲ್ಲ. ಇದಕ್ಕೆ ಕಾರಣವೇನೆಂದು ಸಚಿವ ಜಮೀರ್ ಅಹ್ಮದ್ ಬಹಿರಂಗಪಡಿಸಿದ್ದಾರೆ.

ಕಳೆದ ವರ್ಷವೂ ಸಿಎಂ ಸಿದ್ದರಾಮಯ್ಯ ಜಮೀರ್ ಅಹ್ಮದ್ ಜೊತೆಗೆ ಚಾಮರಾಜಪೇಟೆಯಲ್ಲಿ ಈದ್ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಮುಸ್ಲಿಂ ಟೋಪಿ ಧರಿಸಿ ಸಿದ್ದರಾಮಯ್ಯ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಆದರೆ ಈ ಬಾರಿ ಜಮೀರ್ ಜೊತೆಗೆ ಈದ್ ಪ್ರಾರ್ಥನೆಯಲ್ಲಿ ಸಿದ್ದರಾಮಯ್ಯ ಇರಲಿಲ್ಲ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಈಗಾಗಲೇ ಮುಸ್ಲಿಂ ಪರ ಎಂಬ ಇಮೇಜ್ ಹೊಂದಿರುವ ಕಾರಣ ಸಿದ್ದರಾಮಯ್ಯ ಅನಗತ್ಯ ವಿವಾದ ಬೇಡವೆಂದು ದೂರ ಸರಿದರಾ ಎಂಬ ಅನುಮಾನಗಳಿತ್ತು. ಅದಕ್ಕೆಲ್ಲಾ ಜಮೀರ್ ತೆರೆ ಎಳೆದಿದ್ದಾರೆ.

‘ಈವತ್ತು ಬೆಳಿಗ್ಗೆ 9.35 ಕ್ಕೆ ಸಿಎಂ ಫೋನ್ ಮಾಡಿದ್ದರು. ಅವರಿಗೆ ಹುಷಾರಿಲ್ಲದ ಕಾರಣ ಬರಕ್ಕೆ ಆಗಲ್ಲ ಅಂದ್ರು. ಹೀಗಾಗಿ ರಾಜ್ಯ ಮುಖ್ಯಮಂತ್ರಿಗಳಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿದೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಾ ಕೃತಿಕಾ ರೆಡ್ಡಿ ಕೊಲ್ಲಲು ಡಾ ಮಹೇಂದ್ರ ರೆಡ್ಡಿ ಅನಸ್ತೇಷಿಯಾ ಕದ್ದಿದ್ದು ಎಲ್ಲಿಂದ ಗೊತ್ತಾ

ಖಾರ ಅಗತ್ಯಕ್ಕಿಂತ ಜಾಸ್ತಿಯಿದ್ರೆ ಒಳ್ಳೇದಲ್ಲ: ನಾರಾ ಲೋಕೇಶ್ ಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಉದ್ಯಮಿಗಳಾಯ್ತು, ಈಗ ಕ್ರಿಕೆಟಿಗರ ಸರದಿ: ಬೆಂಗಳೂರು ಟ್ರಾಫಿಕ್ ಬಗ್ಗೆ ಸುನಿಲ್ ಜೋಶಿ ಹೇಳಿದ್ದೇನು

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಹಾರ್ಟ್ ಅಟ್ಯಾಕ್ ಆದ ತಕ್ಷಣ ಟ್ಯಾಬ್ಲೆಟ್ ತೆಗೆದುಕೊಂಡ್ರೆ ರಿಸ್ಕ್ ಕಡಿಮೆಯಾಗುತ್ತಾ: ಡಾ ಸಿಎನ್ ಮಂಜುನಾಥ್

ಮುಂದಿನ ಸುದ್ದಿ
Show comments