Select Your Language

Notifications

webdunia
webdunia
webdunia
webdunia

ಗೆದ್ದ ಬೆನ್ನಲ್ಲೇ ಒಮರ್ ಅಬ್ದುಲ್ಲಾ ದಿಡೀರ್ ಮೋದಿ ಹೊಗಳುತ್ತಿರುವುದಕ್ಕೆ ಕಾರಣವೇನು

Omar Abdullah

Krishnaveni K

ಜಮ್ಮು ಕಾಶ್ಮೀರ , ಬುಧವಾರ, 9 ಅಕ್ಟೋಬರ್ 2024 (16:15 IST)
Photo Credit: X
ಜಮ್ಮು ಕಾಶ್ಮೀರ: ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲುವು ಸಾಧಿಸುತ್ತಿದ್ಧಂತೇ ಒಮರ್ ಅಬ್ದುಲ್ಲಾ ಮೋದಿ ಸರ್ಕಾರವನ್ನು ಹೊಗಳಲು ಶುರು ಮಾಡಿರುವುದು ಅನೇಕರ ಅಚ್ಚರಿಗೆ ಕಾರಣವಾಗಿದೆ.

ಒಮರ್ ಪಕ್ಷ ಇಂಡಿಯಾ ಒಕ್ಕೂಟದಲ್ಲಿದೆ. ಹಾಗಿದ್ದರೂ ಒಮರ್ ಅಬ್ದುಲ್ಲಾ ಕೇಂದ್ರ ಸರ್ಕಾರಕ್ಕೆ ಜೈ ಎನ್ನುತ್ತಿರುವುದು ಅನೇಕರ ಅಚ್ಚರಿಗೆ ಕಾರಣವಾಗುತ್ತಿದೆ. ಒಂದೆಡೆ ಕಾಂಗ್ರೆಸ್ ಈಗಲೂ ನ್ಯಾಷನಲ್ ಕಾನ್ಫರೆನ್ಸ್ ನಮ್ಮ ಜೊತೆಗೇ ಇದೆ ಎನ್ನುತ್ತಿದೆ. ಆದರೆ ಒಮರ್ ಅಬ್ದುಲ್ಲಾ ಈಗಿನ ವರಸೆ ನೋಡಿದರೆ ಅವರು ಬಿಜೆಪಿ ಜೊತೆ ಹೋಗುವ ಲಕ್ಷಣವಿದೆ.

ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಸ್ಥಾನ ಮಾನ ರದ್ದಾದ ಬಳಿಕ ಅದೂ ಕೂಡಾ ಇತರೇ ರಾಜ್ಯಗಳಂತೇ ಆಗಿದೆ. ಹೀಗಾಗಿ ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರ ಇರಲೇ ಬೇಕು. ಸದ್ಯಕ್ಕೆ ರಾಜ್ಯಕ್ಕೆ ವಿಶೇಷ ಅನುದಾನ ಕೊಡಿಸುವ ನಿಟ್ಟಿನಲ್ಲಿ ಅವರು ಕೇಂದ್ರದ ಜೊತೆಗಿರುವ ಮಾತನಾಡುತ್ತಿರಬಹುದು ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ.

ಆದರೆ ಇದರ ಹಿಂದೆ ಕೇವಲ ಇದೊಂದೇ ಕಾರಣವಿರಲಾರದು. ಕಾಂಗ್ರೆಸ್ ಗೆ ಪರೋಕ್ಷ ಎಚ್ಚರಿಕೆ ಕೊಡುವ ಅಥವಾ ಮುಂದೆ ಬಿಜೆಪಿ ಜೊತೆಗೂಡಿಯೇ ಸರ್ಕಾರ ರಚಿಸುವ ಇರಾದೆ ಒಮರ್ ಅಬ್ದುಲ್ಲಾಗಿರಬಹುದು ಎಂದು ಇನ್ನು ಕೆಲವರು ವಿಶ್ಲೇಷಿಸಿದ್ದಾರೆ. ಇದೇ ಕಾರಣಕ್ಕೆ ಕಣಿವೆ ರಾಜ್ಯದಲ್ಲಿ ಚುನಾವಣೆ ಗೆಲುವಿನ ಬಳಿಕ ಒಮರ್ ವರಸೆಯೇ ಬದಲಾಗಿದೆ ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಾವಿ ಜೈಲಿಂದ್ದ ಬೆಂಗಳೂರಿಗೆ ಪ್ರದೋಷ್ ಶಿಫ್ಟ್‌, ಕಾರಣ ಹೀಗಿದೆ