Publish Date: Tue, 02 Jan 2018 (19:45 IST)
Updated Date: Tue, 02 Jan 2018 (19:47 IST)
ತಮಿಳುನಾಡಿನಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಅಲ್ಲಿಗೆ ಹೋಗಿ ನಾನು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಏನಾದರೂ ಆದಾಗ ಏಕೆ ಇಲ್ಲಿಗೆ ಬರಲ್ಲ ಎಂದು ಮಾಜಿ ಸಚಿವ ಹಾಗೂ ನಟ ಅಂಬರೀಶ ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕದಲ್ಲಿ ವಿಕೋಪಗಳು ನಡೆದಾಗ ನರೇಂದ್ರ ಮೋದಿ ಅವರು ಇಲ್ಲಿಗೆ ಬಂದು ಭೇಟಿ ನೀಡಲಿಲ್ಲ. ಯಾಕೆ ಕರ್ನಾಟಕದವರು ಭಾರತೀಯರು ಅಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾರ್ಥವನ್ನು ಬಿಟ್ಟರೆ ಮಹಾದಾಯಿ ಸಮಸ್ಯೆ ಒಂದು ದಿನದಲ್ಲಿ ಬಗೆಹರಿಯುತ್ತದೆ. ಆದರೆ, ನರೇಂದ್ರ ಮೋದಿ ಅವರು ರಾಜ್ಯದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾವೆಲ್ಲ ಒಂದೇ ದೇಶದ ಪ್ರಜೆಗಳು. ಕೇವಲ ಮದ್ರಾಸಿನವರು ಮಾತ್ರ ಭಾರತೀಯರಲ್ಲ. ನಮಗೂ ಮತ್ತು ಮದ್ರಾಸಿನವರೆಗೂ ಸರಿಯಾದ ಮಾರ್ಗದಲ್ಲಿ ನೀರನ್ನು ಹಂಚಿಕೆ ಮಾಡಿ ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.