Select Your Language

Notifications

webdunia
webdunia
webdunia
webdunia

ಮೋದಿ ಮೀಸೆಯ ಕೂದಲಾದರೆ, ಕಾಂಗ್ರೆಸ್‌ನವರು ಬಾಲದ ಕೂದಲು– ಕೇಂದ್ರ ಸಚಿವ

ಮೋದಿ ಮೀಸೆಯ ಕೂದಲಾದರೆ, ಕಾಂಗ್ರೆಸ್‌ನವರು ಬಾಲದ ಕೂದಲು– ಕೇಂದ್ರ ಸಚಿವ
ಶಿವಪುರಿ , ಸೋಮವಾರ, 1 ಜನವರಿ 2018 (18:21 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೀಸೆಯ ಕೂದಲು ಇದ್ದಂತೆ, ಕಾಂಗ್ರೆಸ್ ನಾಯಕರು ಬಾಲದ ಕೂದಲು ಇದ್ದಂತೆ ಎಂದು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ವಿಚಿತ್ರವಾದ ಹೋಲಿಕೆ ಮಾಡಿದ್ದಾರೆ.
 
ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ತುಂಬಾ ವ್ಯತ್ಯಾಸ ಇದೆ. ನರೇಂದ್ರ ಮೋದಿ ಮೀಸೆಯ ಕೂದಲಿಗೆ ಸಮವಾದರೆ ಕಾಂಗ್ರೆಸ್ ನಾಯಕರು ಬಾಲದ ಕೂದಲಿಗೆ ಸಮ ಎಂದು ಹೇಳಿದ್ದಾರೆ.
 
ಮಧ್ಯಪ್ರದೇಶದ ಕೋಲಾರಸ್ ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿಯಂತಾಗಲು ಇನ್ನೂ ಬಹಳ ದಿನ ಬೇಕು ಎಂದು ಡಿಸೆಂಬರ್ 30ರಂದು ಟೀಕೆ ಮಾಡಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಶಾ ಭೇಟಿಯ ನಂತರ ಪ್ರಮುಖರ ಸಭೆ ನಡೆಸಿ ರಾಜ್ಯ ನಾಯಕರು