Select Your Language

Notifications

webdunia
webdunia
webdunia
webdunia

ಅಣುಅಣುವಿನಲ್ಲೂ ದೇವರಿರುವನು ಪಾರ್ವತಿ ದೇವಿಯ ಬಚ್ಚಲು ಮನೆಯಲ್ಲಿ ಯಾಕೆ ಇರ್ಲಿಲ್ಲ: ಬಿಟಿ ಲಲಿತಾ

Authour BT Lalita Nayak, Controversial Statement About Hindu Godu, Parvathy God

Sampriya

ಧಾರವಾಡ , ಶುಕ್ರವಾರ, 22 ನವೆಂಬರ್ 2024 (19:12 IST)
Photo Courtesy X
ಧಾರವಾಡ: ಮಾಜಿ ಸಚಿವೆ, ನಟಿ, ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಬಿಟಿ ಲಲಿತಾ ನಾಯಕ್‌ ಮತ್ತೊಮ್ಮೆ ಹಿಂದೂ ದೇವರುಗಳ ಅವಹೇಳನ ಮಾಡುವ ಮೂಲಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಮಾರಂಭದಲ್ಲಿ ಹಿಂದೂ ದೇವರುಗಳಾದ ಗಣೇಶ, ಶಿವ, ಪಾರ್ವತಿ, ಅಯ್ಯಪ್ಪನ ಬಗ್ಗೆ ಲೇವಡಿ ಮಾಡಿ ಮಾತನಾಡಿದ್ದಾರೆ. ಅದ್ಯ ಇವರ ಭಾಷಣದ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಗಣೇಶ ಅನ್ನೋದು ಒಂದು ಜ್ಞಾನ. ಆ ಜ್ಞಾನಕ್ಕೆ ಒಂದು ಆಕಾರ ಕೊಟ್ಟಿದ್ದಾರೆ. ಅದಕ್ಕೆ ಒಂದು ಸೊಂಡಿಲು, ತಲೆ ಇದೆ. ಈಶ್ವರ ಅನ್ನುವಂತಹ ಅಪ್ಪ ಇದಾನೆ. ದೇವರು ಇದ್ದವನು ಯಾರನ್ನಾದರೂ ಕೊಲ್ಲುತ್ತಾನಾ? ಧರೆಯಿಂದ ಆಕಾಶದೆತ್ತರಕ್ಕೆ ಬೆಳೆದವನು ದೇವರು. ಅಣುರೇಣು ತೃಣಕಾಷ್ಟದಲ್ಲಿಯೂ ದೇವರಿದ್ದಾನೆ ಎನ್ನುತ್ತೀರಿ. ಹಾಗಿದ್ದರೆ, ಪಾರ್ವತಿ ದೇವಿಯ ಬಚ್ಚಲು ಮನೆಯಲ್ಲಿ ದೇವರು ಇರ್ಲಿಲ್ವಾ ಎಂದು ಲೇವಡಿ ಮಾಡಿದ್ದಾನೆ.

ಹುಡುಗ ಅಡ್ಡ ನಿಂತಿದ್ದಾನೆ ಎಂದು ಕೊಂದು ಹೋಗುವವನ್ನು ದೇವರು ಅನ್ನೋದು ಹೇಗೆ? ಅವರೆಲ್ಲ ದೇವರಲ್ಲ, ಮನುಷ್ಯರು. ಆ ಮನುಷ್ಯ ಮಾಡಿರೋ ತಪ್ಪು ನಾವು ಮಾಡಬಾರದು. ಅಯ್ಯಪ್ಪ ಭಕ್ತರು ಅಂತಾ ಕೆಲವರು ಬಹಳ ಮಾಡುತ್ತಿರುತ್ತಾರೆ. ಆದರೆ, ಅಯ್ಯಪ್ಪ ಕಾಡಿನಲ್ಲಿ ಇಲ್ಲ. ಅಯ್ಯಪ್ಪ ಎಲ್ಲ ಕಡೆ ಅನಾಥವಾಗಿ ಇದ್ದಾನೆ. ಅನೇಕ ಅನಾಥ ಮಕ್ಕಳಿದ್ದಾರೆ. ಅವರಿಗೆ ತಂದೆ-ತಾಯಿ ಇಲ್ಲ. ಅವರನ್ನು ನೋಡಿಕೊಳ್ಳುವ ಕೆಲಸ ಆಗಬೇಕು. ಅದನ್ನು ಬಿಟ್ಟು ಕಾಡಿಗೆ ಹೋಗುವುದಲ್ಲ ಎಂದು ಅಯ್ಯಪ್ಪ ಮಾಲಾಧಾರಿಗಳ ಬಗ್ಗೆ ಅವಹೇಳನ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು: ಇಬ್ಬರು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ