Publish Date: Thu, 16 Jun 2022 (09:13 IST)
Updated Date: Thu, 16 Jun 2022 (05:15 IST)
ವಿಜಯಪುರ : ಮೂವರು ಮಕ್ಕಳೊಂದಿಗೆ ತಾಯಿ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ತಿಕೋಟಾ ತಾಲೂಕಿನ ತೊರವಿ ತಾಂಡಾ ನಂ.1ರಲ್ಲಿ ಬುಧವಾರ ಸಂಭವಿಸಿದೆ.
ತೊರವಿ ತಾಂಡಾ ನಂ.1ರ ನಿವಾಸಿಗಳಾದ ಅನಿತಾ ಪಿಂಟು ಜಾಧವ (27), ಪ್ರವೀಣ (6), ಸುದೀಪ (4) ಮಮದಿಕಾ (2) ಮೃತಪಟ್ಟವರು.
ತಾಯಿ ಅನಿತಾ ಜಾಧವ್ ತನ್ನ ಮೂವರು ಮಕ್ಕಳನ್ನು ತೋಟದಲ್ಲಿನ ಕೃಷಿ ಹೊಂಡಕ್ಕೆ ಎಸೆದು ತಾನೂ ಅದೇ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲಿಸಿದ್ದು, ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.