Select Your Language

Notifications

webdunia
webdunia
webdunia
webdunia

ವಸತಿ ನಿಲಯದ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು ಏಕೆ?

ಆಹಾರ
ವಸತಿ ನಿಲಯದ ಇಬ್ಬರು ವಿದ್ಯಾರ್ಥಿನಿಯರು ಆಹಾರದಲ್ಲಿ ಏರುಪೇರಿನ ಸಮಸ್ಯೆಯಿಂದಾಗಿ ಅಸ್ವಸ್ಥಗೊಂಡ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಬಿಸಿಎಂ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ.

ಆಹಾರದಲ್ಲಿ ಏರುಪೇರಿನ ಸಮಸ್ಯೆಯಾಗಿ ಪ್ರಥಮ ಪಿಯುಸಿ ಓದುತ್ತಿರುವ ಅರ್ಪಿತಾ, ನಿಖಿತಾ ಅಸ್ವಸ್ಥಗೊಂಡ ವಿದ್ಯಾರ್ಥಿನಿಯರಾಗಿದ್ದಾರೆ. ಅವರನ್ನು ಕೂಡಲೇ ಕಡಗಂಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ವಸತಿ ನಿಲಯದಲ್ಲಿ ರಾತ್ರಿ ಆಹಾರ ಸೇವಿಸಿದ್ದಾರೆ. ಆ ನಂತರ ಈ ಇಬ್ಬರು ವಿದ್ಯಾರ್ಥಿನಿಯರು ಏಕಾಏಕಿಯಾಗಿ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.



Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷ್ಮೀ ಹೆಬ್ಬಾಳಕರ್ ಮೇಲುಗೈ: ಜಾರಕಿಹೊಳಿಗೆ ಮುಖಭಂಗ