Select Your Language

Notifications

webdunia
webdunia
webdunia
webdunia

ಯತ್ನಾಳ್ ಎಂದ್ರೆ ಸಿಡಿಮಿಡಿಯಾಗುತ್ತಿದ್ದ ರೇಣುಕಾಚಾರ್ಯ ಹೀಗ್ಯಾಕೆ ಉಲ್ಟಾ ಹೊಡೆದ್ರು

MLA Basanagouda Yatnal Patil, EX MP Renukacharya, BJP President BY Vijayendra,

Sampriya

ಬೆಂಗಳೂರು , ಗುರುವಾರ, 13 ಮಾರ್ಚ್ 2025 (16:05 IST)
Photo Courtesy X
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿರುವ ಶಾಸಕ ಬಸನಗೌಡ ಪಾಟೀಲ್‌ ಅವರ ಬಳಿ ಬಿಜೆಪಿ ಮಾಜಿ ಸಚಿವ ರೇಣುಕಾಚಾರ್ಯ ಸಂಘರ್ಷ ಬೇಡ ಒಂದಾಗೋಣ ಬನ್ನಿ ಎಂದು ಆಹ್ವಾನ ನೀಡಿದರು.

ಬುಧವಾರ ರಾತ್ರಿ ಯತ್ನಾಳ ಬಣ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಸಭೆ ನಡೆಸಿದ ಬೆನ್ನಲ್ಲೇ ರೇಣುಕಾಚಾರ್ಯ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಯತ್ನಾಳ್ ಅವರು ನಮ್ಮ ಸಮುದಾಯದವರು. ಅವರಲ್ಲಿ ಸಂಘರ್ಷ ಬೇಡ ಎಂದು ಕೇಳುತ್ತಾನೆ. ಹಾಗಂತ ನಾನು ಸಾಫ್ಟ್ ಆಗಲ್ಲ ಬಗ್ಗುವುದಿಲ್ಲ. ನಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲ ಎಂದರು.

ಎಲ್ಲರೂ ಒಟ್ಟಾಗಿ ಸೇರಿಕೊಂಡು ಈ ಸಮಾಜವನ್ನು ಸಂಘಟನೆ ಮಾಡೋಣ ಎಂದು ಹೇಳಿದರು.

ಸಮಾಜದ ಸಂಘಟನೆ ಅಂತಾ ಬಂದಾಗ ನಾವೆಲ್ಲರೂ ಒಟ್ಟಾಗಿ ಹೋಗಲೇ ಬೇಕು. ಎಲ್ಲರೂ ಒಟ್ಟಾಗಿ ಸೇರಿ ವೀರಶೈವ ಲಿಂಗಾಯತರ ಸಮಾವೇಶವನ್ನು ಮಾಡೋಣ ಎಂದು ಯತ್ನಾಳ್‌ಗೆ ರೇಣುಕಾಚಾರ್ಯ ಆಹ್ವಾನ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಜಮೀರ್ ಹೇಳಿದಾಕ್ಷಣ ಏನೂ ಆಗಲ್ಲ: ಮುಸ್ಲಿಮರ ಮೀಸಲಾತಿ ಹೆಚ್ಚಳ ಬಗ್ಗೆ ಪ್ರಹ್ಲಾದ್ ಜೋಶಿ ಗರಂ