ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಮೃತಪಟ್ಟ ದಿವ್ಯಾಂಶಿ ತಾಯಿ ಇದೀಗ ಠಾಣೆ ಮೆಟ್ಟಿಲೇರಿದ್ದಾರೆ.
ದಿವ್ಯಾಂಶಿ ತಾಯಿ ಅಶ್ವಿನಿ ಇಂದು ಕಮರ್ಶಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮರಣೋತ್ತರ ಪರೀಕ್ಷೆ ವೇಳೆ ಮಗಳ ಮೃತದೇಹದಿಂದ ಕಿವಿಯೋಲೆ ಕಳುವಾಗಿದೆ ಎಂದು ದೂರನ್ನು ನೀಡಿದ್ದಾರೆ.
ಅಶ್ವಿನಿ ಅವರು ಬೌರಿಂಗ್ ಆಸ್ಪತ್ರೆ ವಿರುದ್ಧ ದೂರನ್ನು ನೀಡಿದ್ದಾರೆ.
ಆಸ್ಪತ್ರೆಯವರ ಬಳಿ ಕಿವಿಯೊಲೆ ಸಂಬಂದ ಅವರ ಕೇಳಿಕೊಂಡಿದ್ದು, ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಇದೀಗ ಅಶ್ವಿನಿ ಅವರು ಠಾಣೆ ಮೆಟ್ಟಿಲೇರಿದ್ದಾರೆ.
ದಿವ್ಯಾಂಶಿಗೆ ಈ ಓಲೆಯನ್ನು ಅವರ ಮಾವ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಕೊಟ್ಟಿದ್ದು. ಅದರ ಮೇಲೆ ಆಕೆಗೆ ವಿಶೇಷವಾದ ಪ್ರಿತಿಯಿದ್ದು, ಈ ಹಿನ್ನೆಲೆ ನಾನು ಆ ಓಲೆಯನ್ನು ಕೇಳಿಕೊಂಡಿದ್ದೇನೆ ಎಂದಿದ್ದಾರೆ.