Publish Date: Sun, 18 Feb 2018 (07:05 IST)
Updated Date: Sun, 18 Feb 2018 (07:08 IST)
ಬೆಂಗಳೂರು : ಬಿಎಸ್ಟಿಯ ಮಾಯಾವತಿ ಬಂದಿದ್ದು ನಮಗೆ ಆನೆ ಬಲ ಬಂದಂತಾಗಿದೆ ಎಂದು ಜೆಡಿಎಸ್ ಸಮಾವೇಶದಲ್ಲಿ ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.
‘ಕಾಂಗ್ರೆಸ್ –ಬಿಜೆಪಿ ಮಣಿಸಲು ನಮ್ಮದು ದೊಡ್ಡ ಮೈತ್ರಿಕೂಟದ ಶಕ್ತಿ. ರಾಜ್ಯಕ್ಕೆ ಯಾರ್ಯಾರು ಏನೇನು ಮಾಡಿದ್ದರೆಂಬುದನ್ನು ಬಿಚ್ಚಿಡುತ್ತೇನೆ. ಫೆ18ರ ಆರ್ಯ-ವೈಶ್ಯ ಸಮಾವೇಶದಲ್ಲಿ ಎಲ್ಲವನ್ನೂ ತಿಳಿಸುತ್ತೇನೆ. ರಾಜ್ಯದ ರೈತರಿಗೆ ಕಾಂಗ್ರೆಸ್, ಬಿಜೆಪಿ ಏನು ಮಾಡಿದೆ? ರಾಜ್ಯದ ತೆಂಗು, ಅಡಿಕೆ ಬೆಳೆಗಾರರ ಸಮಸ್ಯೆಯನ್ನೂ ಆಲಿಸುತ್ತಿಲ್ಲ. ಕಾಂಗ್ರೆಸ್ ಮೇಲೆ ಬಿಜೆಪಿ, ಬಿಜೆಪಿ ಮೇಲೆ ಕಾಂಗ್ರೆಸ್ ದೂರಿದ್ದೇ ಆಯ್ತು. ಆದರೆ ರಾಜ್ಯದ ರೈತರ ಬಗ್ಗೆ ರಾಷ್ಟ್ರೀಯ ಪಕ್ಷಗಳು ಏನೂ ಮಾಡಿಲ್ಲ.’ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಷ್ಟ್ರೀಯ ಪಕ್ಷಗಳ ವಿರುದ್ದ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ