Select Your Language

Notifications

webdunia
webdunia
webdunia
webdunia

ಅಶೋಕ್ ಗೆ ಕೈ ತಪ್ಪಿದ್ದೇಕೆ ಅಧ್ಯಕ್ಷ ಸ್ಥಾನ

ಅಶೋಕ್ ಗೆ ಕೈ ತಪ್ಪಿದ್ದೇಕೆ ಅಧ್ಯಕ್ಷ ಸ್ಥಾನ
bangalore , ಭಾನುವಾರ, 30 ಜುಲೈ 2023 (20:07 IST)
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆಗೆ ಕೊನೆಗೂ ಮುಹೂರ್ತ ಕೂಡಿಬಂದಂತಿದೆ. ಒಕ್ಕಲಿಗ ನಾಯಕನಿಗೇ ಪಟ್ಟಕಟ್ಟಲು ಕೇಸರಿ ಹೈಕಮಾಂಡ್ ನಿರ್ಧರಿಸಿದ್ದು, ಸಂಘಟನೆಯ ಹಿನ್ನೆಲೆ ಹಿಂದುತ್ವದ ಅಜೆಂಡಾ ಇರುವ ಸಿಟಿ ರವಿ ಆಯ್ಕೆ ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಈ ಮಧ್ಯೆ ಮತ್ತೊಬ್ಬ ಪ್ರಬಲ ಒಕ್ಕಲಿಗ ನಾಯಕ ಸಾಮ್ರಾಟ್ ಅಶೋಕ್ ಗೆ ಚಾನ್ಸ್ ಮಿಸ್ಸಾಗಿರೋದ್ರ ಹಿಂದೆ ಸಾಕಷ್ಟು ಕಾರಣಗಳು ಕೇಳಿಬರ್ತಿವೆ .

ರಾಜ್ಯ ಬಿಜೆಪಿಯ ಸಾರಥಿ ಆಯ್ಕೆಗೆ ಕೇಸರಿ ಹೈಕಮಾಂಡ್ ಕೊನೆಗೂ ಮುಹೂರ್ತ ಫಿಕ್ಸ್ ಮಾಡಿದಂತೆ ಕಾಣ್ತಿದೆ. ಬಣ ರಾಜಕೀಯ, ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್, ಟಾಕ್ ವಾರ್ ಡ್ಯಾಮೇಜ್ ಗಳಿಂದ ಎಚ್ಚೆತ್ತ ಹೈಕಮಾಂಡ್ ಕೊನೆಗೂ ಲಗಾಮು ಹಾಕಲು ಮುಂದಾಗಿದೆ. ಪಕ್ಷದಲ್ಲಿ ಸಮನ್ವಯತೆ ಕಾಪಾಡಿ ಮುನ್ನಡೆಸಬೇಕಾದ ಸಾರಥಿ ಆಯ್ಕೆ ಇನ್ನೊಂದು ವಾರದೊಳಗೆ ಘೋಷಣೆಯಾಗಲಿದೆ. ಅಳೆದೂ ತೂಗಿ ಜಾತಿ ಸಮೀಕರಣದ ಆಧಾರದ ಮೇಲೆ ಒಕ್ಕಲಿಗ ಸಮುದಾಯದ ನಾಯಕನಿಗೆ ಪಟ್ಟ ಕಟ್ಟಲು ಕೇಸರಿ ಪಡೆ ಸಿದ್ದವಾಗಿದೆ. ಈ ಪೈಕಿ ರೇಸ್ ನಲ್ಲಿದ್ದ ಅಶೋಕ್, ಅಶ್ವಥ್ ನಾರಾಯಣ, ಸಿಟಿ ರವಿ, ಶೋಭಾ ಕರಂದ್ಲಾಜೆ  ಪೈಕಿ ಸಿಟಿ ರವಿ ಆಯ್ಕೆ ಬಹುತೇಕ ಪೈನಲ್ ಆಗಿದ್ದು ಘೋಷಣೆಯೊಂದೇ ಭಾಕಿ ಎನ್ನಲಾಗ್ತಿದೆ.

 ಮಾಜಿ ಡಿಸಿಎಂ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಸಾಮ್ರಾಟ ಎಂದು ಕರೆಸಿಕೊಳ್ಳುವ ಆರ್.ಅಶೋಕ್ ಗೆ ರಾಜ್ಯಾಧ್ಯಕ್ಷ ಸ್ಥಾನ ಕೊನೆಯ ಕ್ಷಣದಲ್ಲಿ ಕೈತಪ್ಪಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ ಸೈ ಎನಿಸಿಕೊಂಡಿರುವ ಅಶೋಕ್ ಒಕ್ಕಲಿಗ ಸಮುದಾಯದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ರು ಹೈಕಮಾಂಡ್ ಮನಗೆಲ್ಲುವಲ್ಲಿ ಅಶೋಕ್ ವಿಫಲರಾಗಿದ್ದಾರೆ ಎನ್ನಲಾಗ್ತಿದೆ.

ಆರ್. ಅಶೋಕ್ ಗೆ ರಾಜ್ಯಾಧ್ಯಕ್ಷ ಸ್ಥಾನ ಕೈ ತಪ್ಪಲು ಕಾರಣವೇನು
 
>ಅಶೋಕ್ ಮೇಲೆ ಹೊಂದಾಣಿಕೆ ರಾಜಕಾರಣದ ಆರೋಪ
 
>ಬಿ.ಎಸ್ ಯಡಿಯೂರಪ್ಪ ಆಪ್ತನೆಂಬ ಪ್ರಬಲ ಕಾರಣ
 
>ಸಂಘಪರಿವಾರಕ್ಕೂ ಅಶೋಕ್ ಗೂ ದೂರಾ -ದೂರಾ
 
 > ಹಿಂದುತ್ವದ ಅಜೆಂಡಾ ಇಲ್ಲ, ಕಾರ್ಯಕರ್ತರ ಮನಗೆಲ್ಲುವಲ್ಲಿ ವಿಫಲ
 
> ಕಳೆದ ಚುನಾವಣೆಯಲ್ಲಿ ವರಿಷ್ಠರು ಕೊಟ್ಟ ಟಾಸ್ಕ್ ಕಂಪ್ಲೀಟ್ ಮಾಡುವಲ್ಲಿ ವಿಫಲ
 
> ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಪ್ರಬಲ ಪೈಪೋಟಿ ಕೊಡುವಲ್ಲಿ ಸೋತ ಸಾಮ್ರಾಟ್
 
> ಪದ್ಮನಾಭನಗರ ಕ್ಷೇತ್ರ ಬಿಟ್ಟು ಹಳೆ ಮೈಸೂರು ಭಾಗದಲ್ಲೂ ನಾಯಕತ್ವ ತೋರಿಸುವಲ್ಲಿ ವಿಫಲ

Share this Story:

Follow Webdunia kannada

ಮುಂದಿನ ಸುದ್ದಿ

ಶಕ್ತಿ ಯೋಜನೆಯಿಂದ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆ