Publish Date: Wed, 17 Jan 2018 (12:23 IST)
Updated Date: Wed, 17 Jan 2018 (12:31 IST)
ಮಡಿಕೇರಿ : ನಟ ಚೇತನ್ ಅವರು ಎಲ್ಲಾ ಸಮುದಾಯದಂತೆ ಕಾಡುಗೊಲ್ಲರಿಗೂ ಮಾನ್ಯತೆ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ನಟ ಚೇತನ್ ಅವರು ಈ ಬಗ್ಗೆ ಮಾತನಾಡುತ್ತಾ, ‘ಕಾಡುಗೊಲ್ಲರ ಸಂಸ್ಕೃತಿ ಅತ್ಯಂತ ಪ್ರಸಿದ್ಧವಾದ ಸಂಸ್ಕೃತಿ. ಅವರ ಸಂಪ್ರದಾಯ ನಾಡಿನ ಹಿರಿಮೆ. 10 ವರ್ಷದಿಂದ ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಹೋರಾಟ ನಡೆಸಿದ್ದು, ಮಾನ್ಯತೆ ನೀಡುವಂತೆ ಸಿಎಂ, ಕಾನೂನು ಸಚಿವರು ಹಾಗು ಸಮಾಜ ಕಲ್ಯಾಣ ಸಚಿವರಿಗೆ ಮನವಿ ನೀಡಿದ್ದೇವೆ. ಇಂದಿನ ಕ್ಯಾಬಿನೆಟ್ ನಲ್ಲಿ ಬೇಡಿಕೆ ಈಡೇರಿಸುವ ಭರವಸೆ ಇದೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ