Select Your Language

Notifications

webdunia
webdunia
webdunia
webdunia

‘ಸಿಎಂ ಯಡಿಯೂರಪ್ಪ ಮಾಡಿದ್ರಾ ಫೋನ್ ಟ್ಯಾಪ್?’

‘ಸಿಎಂ ಯಡಿಯೂರಪ್ಪ ಮಾಡಿದ್ರಾ ಫೋನ್ ಟ್ಯಾಪ್?’
ಯಾದಗಿರಿ , ಮಂಗಳವಾರ, 22 ಅಕ್ಟೋಬರ್ 2019 (11:36 IST)

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನ್ನ ಫೋನ್ ಟ್ಯಾಪ್ ಮಾಡುತ್ತಿದ್ದಾರೆ ಅಂತ ಶರಣಗೌಡ ಕಂದಕೂರ್ ಆರೋಪ ಮಾಡಿದ್ದಾರೆ.

ಬಿ.ಎಸ್.ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನಗೆ ಜೀವ ಭಯ ಇದೆ ಅಂತ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಪುತ್ರ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಹೇಳಿದ್ದಾರೆ.

ನಾನು ಆಪರೇಷನ್ ಕಮಲದ ಆಡಿಯೋ ಬಿಡುಗಡೆ ಮಾಡಿದಾಗಿನಿಂದ ನನಗೆ ಯಾರೋ ಹಿಂಬಾಲಿಸುತ್ತಿದ್ದಾರೆ. ನಾನು ಹೋದಲ್ಲಿ ಬಂದಲ್ಲಿ ಕೆಲವರು ಫಾಲೋ ಮಾಡುತ್ತಿದ್ದಾರೆ. ನನಗೆ ಜೀವ ಭಯ ಇದೆ. ನನ್ನ ವಿರುದ್ಧ ಸುಳ್ಳು ಕೇಸ್ ಗಳನ್ನು ದಾಖಲು ಮಾಡಲಾಗುತ್ತಿದೆ ಅಂತ ಶರಣಗೌಡ ಕಂದಕೂರ ದೂರಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಹಣಕ್ಕಾಗಿ ಪತ್ನಿಯನ್ನೇ ಸ್ನೇಹಿತನಿಗೆ ಮಾರಿದ ಪಾಪಿ ಪತಿ