Daily Horoscope
✕

ಗೃಹಜ್ಯೋತಿ ಯೋಜನೆಗೆ ಜಾತಿ ಸರ್ಟಿಫಿಕೇಟ್ ಕೇಳ್ತಿರೋದು ಯಾಕೆ, ಫ್ರೀ ವಿದ್ಯುತ್ ಕೊಡಲೂ ಜಾತಿ ಬೇಕಾ

ಕೃಷ್ಣವೇಣಿ ಕೆ
ಗುರುವಾರ, 2 ಜುಲೈ 2026 (10:35 IST)
ಬೆಂಗಳೂರು: ಗೃಹಜ್ಯೋತಿ ಯೋಜನೆಗೆ ಜಾತಿ ಸರ್ಟಿಫಿಕೇಟ್ ಕೇಳ್ತಿರೋದು ಯಾಕೆ? ಫ್ರೀ ವಿದ್ಯುತ್ ಕೊಡಲೂ ಜಾತಿ ಬೇಕಾ ಎಂದು ಬಿಜೆಪಿ ನಾಯಕ ಆರ್ ಅಶೋಕ್ ಕಿಡಿ ಕಾರಿದ್ದಾರೆ. ಜೊತೆಗೆ ಈಗ ಸಾರ್ವಜನಿಕರಿಂದಲೂ ಈ ಪ್ರಶ್ನೆ ಕೇಳಿಬರುತ್ತಿದೆ.

ನಿನ್ನೆಯಿಂದ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ ಮರುಪರಿಷ್ಕರಣೆಗೆ ಮುಂದಾಗಿದೆ. ಮನೆ ಮನೆಗೆ ಅಧಿಕಾರಿಗಳು ಬಂದು ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ. ಕರ್ನಾಟಕದ ನಿವಾಸಿಗಳಿಗೆ ಮಾತ್ರ ಗೃಹಜ್ಯೋತಿ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ.

ಇದೀಗ ಅಧಿಕಾರಿಗಳಿಗೆ ಗೃಹಜ್ಯೋತಿ ಯೋಜನೆಗೆ ದಾಖಲೆಗಳನ್ನು ನೀಡುವಾಗ ಜಾತಿ ಸರ್ಟಿಫಿಕೇಟ್ ನ್ನೂ ಕೇಳಲಾಗುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಉಚಿತ ವಿದ್ಯುತ್ ಗೂ ಜಾತಿಗೂ ಏನು ಸಂಬಂಧ? ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ.

ಗೃಹಜ್ಯೋತಿ ಎಲ್ಲರಿಗೂ ಫ್ರೀ ಎಂದು ಈಗ ಕಂಡೀಷನ್ ಹಾಕುತ್ತಿರುವುದು ಯಾಕೆ ಎಂದು ಬಿಜೆಪಿ ನಾಯಕ ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ. ಇನ್ನೊಂದೆಡೆ ಗೃಹಜ್ಯೋತಿ ಪರಿಷ್ಕರಣೆ ಹೆಸರಿನಲ್ಲಿ ಸರ್ಕಾರ ತಾನೇ ಎಸ್ಐಆರ್ ನಡೆಸಲು ಮುಂದಾಗಿದೆಯೇ ಎಂದು ಅನುಮಾನ ಮೂಡಿಬರುತ್ತಿದೆ. ಇನ್ನು, ಜಾತಿ ಸರ್ಟಿಫಿಕೇಟ್ ಕೇಳುತ್ತಿರುವುದನ್ನು ಸಮರ್ಥಿಸಿಕೊಂಡಿರುವ ಸಚಿವ ಕೆಜೆ ಜಾರ್ಜ್, ‘ಜಾತಿ ಪ್ರಮಾಣ ಪತ್ರ ಕೇಳಿದರೆ ತಪ್ಪೇನು? ಜಾತಿಗಣತಿಗೆ ಮಾಹಿತಿ ಕೊಟ್ಟಿರುವುದನ್ನೇ ಕೇಳುತ್ತಿದ್ದೇವೆ. ಜಾತಿ ಆಧಾರವಾಗಿ ನಾವು ವಿದ್ಯುತ್ ನೀಡುತ್ತಿಲ್ಲ, ಎಲ್ಲಾ ಜಾತಿಯವರಿಗೆ ವಿದ್ಯುತ್ ನೀಡುತ್ತೇವೆ’ ಎಂದಿದ್ದಾರೆ. ಅದೇನೇ ಇದ್ದರೂ ಸರ್ಕಾರ ಕೇಳುತ್ತಿರುವ ದಾಖಲೆಗಳು ವಿಪಕ್ಷಗಳ ಅಸಮಾಧಾನಕ್ಕೆ ಗುರಿಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments