Webdunia - Bharat's app for daily news and videos

Install App

ರಾಜ್ಯದ ಒಂದೇ ಒಂದು ಕ್ಷೇತ್ರಕ್ಕೂ ಅಭ್ಯರ್ಥಿಯನ್ನ ಘೋಷಿಸಿಲ್ಲ ಯಾಕೆ ಬಿಜೆಪಿ....?

geetha
ಭಾನುವಾರ, 3 ಮಾರ್ಚ್ 2024 (16:23 IST)
ಬೆಂಗಳೂರು-ಲೋಕಸಭಾ ಎಲೆಕ್ಷನ್ ಅಖಾಡಕ್ಕೆ ರಣಕಣ ಸಿದ್ದವಾಗ್ತಾ ಇದೆ... ಯಾವುದೇ ಕ್ಷಣದಲ್ಲಾದರೂ ಎಲೆಕ್ಷನ್ ಆಯೋಗ ಲೋಕಸಭಾ ಎಲೆಕ್ಷನ್ ಡೇಟ್ನ್ನು ಫಿಕ್ಸ್ ಮಾಡಿಬಿಡಬಹುದು.ಹೆಚ್ಚು ಕಮ್ಮಿ ಇನ್ನೇರಡೇ ತಿಂಗಳು ಎಲೆಕ್ಷನ್ ಬಂದು ಬಿಡುತ್ತೆ.... ಎನ್ಡಿಎ ಮತ್ತು ಇಂಡಿಯಾ ಮೈತ್ರಿ ಕೂಟಗಳ ನಡುವೆ ಎಲೆಕ್ಷನ್ ಗೆದ್ದು ಅಧಿಕಾರವನ್ನು ಪಡೆಯುವ ಜಿದ್ದು ಏರ್ಪಟ್ಟಿದೆ.. ಅದರಲ್ಲೂ ಎನ್ಡಿಎ ಕೂಟವೂ ಶತಯಗತಾಯ ಮತ್ತೆ ಮೂರನೇ ಬಾರಿಗೂ ಡೆಲ್ಲಿಯ ಗದ್ದುಗೆಯನ್ನು ಏರುವ ಕನಸು ಕಾಣ್ತಿದೆ.
 
ಕಾಂಗ್ರೆಸ್ನಲ್ಲಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಯಾವಾಗ ರೀಲಿಸ್ ಆಗುತ್ತೆ. ಯಾರಿಗೆಲ್ಲಾ ಟಿಕೆಟ್ ಸಿಗುತ್ತೆ ಅನ್ನೋದು ಬೇರೆ ವಿಚಾರ... ಆದ್ರೆ ಇದೀಗ ಬಿಜೆಪಿ ಮಾತ್ರ ಅಳೆದುತೂಗಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.೧೯೫ ಲೋಕಸಭಾ ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಿಸಿ ರಣಕಣಕ್ಕೆ ಕಹಳೆ ಮೊಳಗಿಸಿದೆ.

ಆದ್ರೆ ಒಂದು ನಿರೀಕ್ಷೆ ಅಂತೂ ಇದ್ದೇ ಇತ್ತು.... ರಾಜ್ಯದ ಒಂದಷ್ಟು ಕ್ಷೇತ್ರಗಳಿಗೂ ಬಿಜೆಪಿಯ ಹೈಕಮಾಂಡ್ ನಾಯಕರು ಅಭ್ಯರ್ಥಿಗಳನ್ನು ಘೋಷಿಸ್ತಾರೆ ಅಂತ.. ಬಟ್ ಕಡೆ ಕ್ಷಣದಲ್ಲಿ ಎಲ್ಲವೂ ಉಲ್ಟಾಪಟ್ಟಾ ಆಗಿ ಹೋಗಿದೆ... ರಾಜ್ಯ ಬಿಜೆಪಿಯ ನಾಯಕರಿಗೂ ಕೂಡ ಇದೊಂಥರಾ ಬಿಗ್ಶಾಕ್ ಆದಂತಾಗಿದೆ. ಯಾಕಂದ್ರೆ ೧೯೫ ಮಂದಿ ಬಿಜೆಪಿಯ ಅಭ್ಯರ್ಥಿಗಳನ್ನು ಲೋಕ ಅಖಾಡಕ್ಕೆ ಇಳಿಸಿರುವ ಮೋದಿ ಅಂಡ್ ಟೀಮ್ ಯಾಕೋ ಕರುನಾಡಿನ ಕಡೆಗೆ ಕಣ್ಣೆ ಹಾಯಿಸದೇ ಮರೆತೇ ಬಿಟ್ಟಿತ್ತಾ ಅನ್ನುವ ಚರ್ಚೆ ಎದ್ದಿದೆ..
 
 
ಯೆಸ್... ಮೋದಿ ಮತ್ತು ಅಮಿತ್ ಶಾ ಅದೇನೆ ನಿರ್ಧಾರ ಮಾಡಿದ್ರು ಕೂಡ, ಯೋಚಿಸಿ ಆಲೋಚಿಸಿ, ಪಕ್ಕಾ ಮಾಸ್ಟರ್ಮೈಂಡ್ ಉಪಯೋಗಿಸಿ ಮಾಡರ್ತಾರೆ.. ಹಾಗೆ ನೋಡಿದ್ರೆ ಮೋದಿ ಮತ್ತು ಅಮಿತ್ ಶಾ ರಾಜಕೀಯ ಲಾಜಿಕ್ ಒಳ್ಳೆಯದ್ದೆ... ಅದೇ ರೀತಿಯಾಗಿ ಈ ಕಡೆ ಕರುನಾಡಿನ ೨೮ ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಟ ೧೦ಕ್ಷೇತ್ರಗಳಿಗಾದ್ರು ತನ್ನ ಹುರಿಯಾಳುಗಳ್ಯಾರು ಅನ್ನೊದನ್ನ ರೀಲಿಸ್ ಮಾಡ್ತಾರೆ ಅನ್ನುವ ಲೆಕ್ಕಾಚಾರ ನಡೆದಿತ್ತು... ಆದ್ರೆ ಕೊನೆಯ ಕ್ಷಣದಲ್ಲಿ ಒಂದೇ ಒಂದು ಕ್ಷೇತ್ರಕ್ಕೂ ಕೂಡ ಬಿಜೆಪಿಯೂ ಟಿಕೆಟ್ ಘೊಷಿಸಿಲ್ಲ ಕರ್ನಾಟಕದಲ್ಲಿ.
 
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಭದ್ರ ಬುನಾದಿಯೇ ಕರುನಾಡಿನ ರಾಜಕಾರಣ... ಇಲ್ಲಿಂದಲೇ ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಕಮಲವನ್ನು ಅರಳಿಸುವ ಅಸಲಿ ಲೆಕ್ಕಾಚಾರ ಬಿಜೆಪಿಯ ಕೇಂದ್ರದ ನಾಯಕರದ್ದು.. ಬಹುಶಃ ಇದೇ ಕಾರಣಕ್ಕೇನೋ ಗೊತ್ತಿಲ್ಲ, ಅಳೆದುತೂಗಿ ಕರುನಾಡಿನಲ್ಲಿ ಪಕ್ಕಾ ಗೆದ್ದೆ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಮೊದಲ ಪಟ್ಟಿಯಲ್ಲಿ ಯಾವುದೇ ಕ್ಷೇತ್ರಕ್ಕೂ ಬಿಜೆಪಿ ಟಿಕೆಟ್ ನೀಡಿಲ್ಲ ಅನ್ನಿಸುತ್ತೆ..
 
ತಮಿಳುನಾಡಿನಲ್ಲೂ ಕೂಡ ಈಗೀಗ ಅಣ್ಣಾಮಲೈ ಆರ್ಭಟದಿಂದ ಬಿಜೆಪಿಗೂ ಒಂದು ಆಶಾಭಾವನೆ ಮೂಡಿದೆ.. ಕಮಲದ ಬೇರನ್ನು ಗಟ್ಟಿಗೊಳಿಸಿಕೊಳ್ಳಲು ವೇದಿಕೆ ನಿಧಾನವಾಗಿ ಸಿದ್ದವಾಗ್ತಾ ಇದೆ... ಹಾಗಾಗಿ ಕರುನಾಡಿನಲ್ಲಿ ಕಳೆದ ಬಾರಿಯಂತೆ ಮೋಡಿ ಮಾಡಲು ಬಿಜೆಪಿಯ ಹೈಕಮಾಂಡ್ ಆಲೋಚಿಸುತ್ತಿದೆ... ಜೊತೆಗೆ ಜೆಡಿಎಸ್ ಜೊತೆ ಮೈತ್ರಿ ಬೇರೆ ಏರ್ಪಟ್ಟಿರೋದ್ರಿಂದ ಎಲ್ಲಿಯೂ ಕೂಡ ಗೊಂದಲ ಆಗದೇ ಇರದಂತೆ ನೋಡಿಕೊಳ್ಳಲು ಸದ್ಯಕ್ಕೆ ಟಿಕೆಟ್ ಘೋಷಿಸೋದು ಬೇಡ ಅನ್ನೋದು ಮೋದಿ ಮತ್ತು ಅಮಿತ್ ಶಾ ಟೀಮ್ನ ಅಸಲಿ ಪ್ಲಾö್ಯನ್ ಇದ್ದಿರಬಹುದು..
 
ಇನ್ನೂ ಅಸೆಂಬ್ಲಿ ಎಲೆಕ್ಷನ್ನಲ್ಲಿ ಬಿಜೆಪಿಯೂ ಅತ್ಯಂತ ಹೀನಾಯವಾಗಿ ಸೋತು ಮಕಾಡೆ ಮಲಗಿದ್ದೇ, ಇವತ್ತು ಕೇಂದ್ರದ ಬಿಜೆಪಿಯ ಹೈಕಮಾಂಡ್ ನಾಯಕರು ಕರುನಾಡಿನಲ್ಲಿನ ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸುವ ವಿಚಾರದಲ್ಲಿ ಡೀಲೇ ಮಾಡಿತಾ ಅನ್ನುವ ಮಾತು ಕೂಡ ಕೇಳಿ ಬರ್ತಾ ಇದೆ.
 
ವಿಧಾನಸಭಾ ಎಲೆಕ್ಷನ್ನಲ್ಲಿ ಕಾಂಗ್ರೆಸ್ಗೆ ಕರುನಾಡಿನ ಜನರು ಮಾಡಿದ ಆಶೀರ್ವಾದ ೧೩೫ ಸೀಟ್ಗಳ ದಿಗ್ವಿಜಯ ಬರೆಯೋದಕ್ಕೆ ಕಾರಣವಾಗಿತ್ತು... ಇವತ್ತಿಗೂ ಕೂಡ ಮೋದಿ ಮತ್ತು ಅಮಿತ್ ಶಾಗೆ ಕರುನಾಡಿನಲ್ಲಾದ ಅಸೆಂಬ್ಲಿಯ ಸೋಲಿನ ಮರ್ಮಾಘಾತವನ್ನು ಮರೆಯಲು ಸಾಧ್ಯವಾಗಿಲ್ಲ.. ದಕ್ಷಿಣ ಭಾರತದ ಹೆಬ್ಬಾಗಿಲಿನ ಈ ಸೋಲೇ ಮೋದಿಯನ್ನು ಇವತ್ತಿಗೂ ಕಾಢ್ತಿದೆ.
 
ಕಾಂಗ್ರೆಸ್ ಗೆದ್ದಿದೆ ಅನ್ನೋದಕ್ಕಿಂತ ಸ್ವತಃ ಮೋದಿಯೇ ಬಂದು ಸಾಲು ಸಾಲು ರ್ಯಾಲಿ, ಸಮಾವೇಶಗಳನ್ನು ಮಾಡಿದ್ದರೂ ಕೂಡ ಬಿಜೆಪಿಯೂ ೬೫ ಸ್ಥಾನ ದಾಟಲಿಲ್ಲ.... ಬಹುಶಃ ಈ ನೋವು ಮೋದಿಯನ್ನು ಅಕ್ಷರಶಃ ಕಾಡಿರಬಹುದು...? ಹಾಗಾಗಿ ಇದೀಗ ಕರ್ನಾಟಕದಲ್ಲಿ ಟಿಕೆಟ್ ನೀಡುವ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಲು ಕೇಂದ್ರದ ಬಿಜೆಪಿಯೂ ನಿರ್ಧರಿಸಿರೋದು ಗೊತ್ತಾಗ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರೆಗ್ನೆನ್ಸಿಗೆ ಟ್ರೈ ಮಾಡುತ್ತಿದ್ದರೆ ಮಹಿಳೆಯರು ಇದನ್ನು ಗಮನಿಸಬೇಕು ಅಂತಾರೆ ಡಾ ಪದ್ಮಿನಿ ಪ್ರಸಾದ್

ಅಂದು ಮುಖ್ಯಮಂತ್ರಿ ಆಗುವ ಆಸೆ ಈಡೇರಲಿಲ್ಲ ಎಂದು ಈಗ ಈಡೇರಿಸಿಕೊಳ್ತಾರಾ ಮಲ್ಲಿಕಾರ್ಜುನ ಖರ್ಗೆ

Karnataka Weather: ತಣ್ಣಗಾಯಿತೇ ಮಳೆಯ ಅಬ್ಬರ, ಹವಾಮಾನ ಬದಲಾವಣೆ ತಪ್ಪದೇ ಗಮನಿಸಿ

ಧರ್ಮಸ್ಥಳ: 15 ಶವ ಹೂತಿಟ್ಟ ಸ್ಥಳವನ್ನು ಗುರುತಿಸಿದ ದೂರುದಾರ, ಪ್ರದೇಶಕ್ಕೆ ಗನ್‌ಮ್ಯಾನ್ ಭದ್ರತೆ

ನಾಳೆ ನಾಗರಪಂಚಮಿ: ನಾಗದೋಷಗಳಿಗೆ ಈ ದಿನ ವಿಶೇಷ ಪೂಜೆ ನೆರವೇರಿಸಿದ್ರೆ ದೂರವಾಗುತ್ತೆ ಸಂಕಷ್ಟ

ಮುಂದಿನ ಸುದ್ದಿ
Show comments