Select Your Language

Notifications

webdunia
webdunia
webdunia
webdunia

ಬಸವರಾಜ ಹೊರಟ್ಟಿ ಇಂದೇ ರಾಜೀನಾಮೆ ಕೊಟ್ಟಿದ್ದೇಕೆ, ಕಾರಣ ಬಯಲು

Basavaraja horatti
ಬೆಂಗಳೂರು: ಕರ್ನಾಟಕ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ್ದಾರೆ. ಅವರು ಇಂದೇ ರಾಜೀನಾಮೆ ನೀಡಿದ್ದು ಯಾಕೆ ಇಲ್ಲಿದೆ ಕಾರಣ.

ಡಿಕೆ ಶಿವಕುಮಾರ್ ಸಂಪುಟ ವಿಸ್ತರಣೆಯಾದ ಬಳಿಕ ಮೇಲ್ಮನೆ ಸಭಾಪತಿ ಸ್ಥಾನ ಕಾಂಗ್ರೆಸ್ ಗೆ ಸೇರಬೇಕು ಎಂದು ಒತ್ತಾಯ ಹೆಚ್ಚಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಲ್ಲ, ನೀಡಿದರೂ ಇನ್ನೂ ಒಂದು ವಾರ ಕಾಲಾವಕಾಶ ಬೇಕು ಎಂದು ಹೇಳುತ್ತಲೇ ಇದ್ದರು.

ಆದರೆ ಇಂದು ದಿಡೀರ್ ಸಿಎಂ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಭೇಟಿ ಮಾಡಿದ ಬಳಿಕ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ದಿಡೀರ್ ಆಗಿ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದು ಯಾಕೆ ಎಂದು ಅವರೇ ಬಳಿಕ ಬಹಿರಂಗಪಡಿಸಿದ್ದಾರೆ.

ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರು ಇಂದೇ ರಾಜೀನಾಮೆ ಕೊಡಿ ಎಂದಿದ್ದಕ್ಕೆ ಇಂದೇ ಕೊಟ್ಟಿದ್ದೇನೆ. ಯಾವಾಗ ಕೊಟ್ಟರೂ ಒಂದೇ. ರಾಜೀನಾಮೆ ಕೊಡಲಿಲ್ಲ ಎಂದರೆ ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದರು. ಹೀಗಾಗಿ ಇಂದೇ ರಾಜೀನಾಮೆ ಕೊಟ್ಟಿದ್ದೇನೆ. ಮುಂದೆ ನನ್ನನ್ನು ಹಂಗಾಮಿ ಸ್ಪೀಕರ್ ಆಗಿ ಮುಂದುವರಿಸುತ್ತಾರೋ ಎಂಬುದು ಅವರಿಗೇ ಬಿಟ್ಟಿದ್ದು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಭ್ಯ ರಾಜಕಾರಣಿ ತನ್ವೀರ್ ಸೇಠ್ ಸಚಿವ ಸ್ಥಾನ ತಪ್ಪಿಸಿದ್ದೆ ಸಿದ್ದರಾಮಯ್ಯ