Select Your Language

Notifications

webdunia
webdunia
webdunia
webdunia

ಎಸ್ಎಂ ಕೃಷ್ಣ ಅಂತ್ಯಕ್ರಿಯೆಗೆ ಶ್ರೀಗಂಧದ ತುಡುಗಳ ಬಳಕೆ ಯಾಕೆ

SM Krishna

Krishnaveni K

ಬೆಂಗಳೂರು , ಬುಧವಾರ, 11 ಡಿಸೆಂಬರ್ 2024 (10:44 IST)
ಬೆಂಗಳೂರು: ಮೊನ್ನೆ ತಡರಾತ್ರಿ ಅಗಲಿದ್ದ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅಂತಿಮ ಯಾತ್ರೆ ಆರಂಭವಾಗಿದ್ದು, ಇಂದು ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅವರ ಚಿತೆಗೆ ಶ್ರೀಗಂಧದ ಕಟ್ಟಿಗೆಗಳನ್ನೇ ಬಳಸಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ.

ಈಗಾಗಲೇ ಬೆಂಗಳೂರಿನ ನಿವಾಸದಿಂದ ತೆರೆದ ವಾಹನದಲ್ಲಿ ಎಸ್ಎಂ ಕೃಷ್ಣ ಅಂತಿಮ ಯಾತ್ರೆ ಆರಂಭವಾಗಿದೆ. ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಹುಟ್ಟೂರಿನಲ್ಲೇ ಸಕಲ ಸರ್ಕಾರೀ ಗೌರವಗಳೊಂದಿಗೆ ಎಸ್ಎಂ ಕೃಷ್ಣಗೆ ಅಂತಿಮ ಕ್ರಿಯೆ ನೆರವೇರಿಸಲಾಗುತ್ತದೆ.

ಈ ವೇಳೆ ಅವರ ಚಿತೆಗೆ 1000 ಕೆ.ಜಿ.ಗಳಷ್ಟು ಶ್ರೀಗಂಧದ ತುಂಡುಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಶಾಸಕ ರವಿ ಗಣಿಗ ಹೇಳಿದ್ದಾರೆ. ಇದಕ್ಕೆ ಕಾರಣವೂ ಇದೆ. ಈ ಹಿಂದೆ ಕರ್ನಾಟಕದಲ್ಲಿ ಶ್ರೀಗಂಧ ಬೆಳೆಯಲು ಇದ್ದ ನಿರ್ಬಂಧಗಳನ್ನು ತೆಗೆದು ಹಾಕಿದ್ದು ಎಸ್ಎಂ ಕೃಷ್ಣ ಅವರು. ಇದರಿಂದ ರೈತರಿಗೆ ಅನುಕೂಲವಾಗಿತ್ತು.

ಅದೇ ಕಾರಣಕ್ಕೆ ಎಸ್ಎಂ ಕೃಷ್ಣಗೆ ಇಂದು ಶ್ರೀಗಂಧದ ತುಂಡುಗಳಿಂದಲೇ ಚಿತೆ ಏರ್ಪಡಿಸಲಾಗುತ್ತಿದೆ. ಈ ಮೂಲಕ ಗೌರವ ಸಮರ್ಪಿಸಲಾಗುತ್ತದೆ ಎಂದು ತಿಳಿದುಬಂದಿದೆ. ಇಂದು ಸಂಜೆ 3 ಗಂಟೆ ನಂತರ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯ ಕ್ರಿಯೆ ನಡೆಯಲಿದೆ. ರಾಜಕೀಯ ಗಣ್ಯರು, ಅಭಿಮಾನಿಗಳು, ಸ್ವಾಮೀಜಿಗಳು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಮತ್ತೆ ಮಳೆ, ಯೆಲ್ಲೊ ಅಲರ್ಟ್