Publish Date: Fri, 13 Sep 2019 (18:38 IST)
Updated Date: Fri, 13 Sep 2019 (19:02 IST)
ಲಂಚಬಾಕ ಅಧಿಕಾರಿಯೊಬ್ಬ ಎಸಿಬಿ ನಡೆಸಿರೋ ದಾಳಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯ ವಾಣಿ ನಗರಿ ಚಿಂತಾಮಣಿಯಲ್ಲಿ ರೈತರೊಬ್ಬರಿಗೆ 60 ಸಾವಿರ ಡಿಮ್ಯಾಂಡ್ ಮಾಡಿ 10 ಸಾವಿರ ಲಂಚ ಸ್ವೀಕರಿಸುವ ವೇಳೆ ಸರ್ವೇಯರ್ ಒಬ್ಬರು, ಎಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ ವೇಳೆ ಬಲೆಗೆ ಬಿದ್ದಿದ್ದಾರೆ.
ಚಿಂತಾಮಣಿ ನಗರದ ತಾಲೂಕು ಕಚೇರಿಯಲ್ಲಿ ಜಮೀನು ಸರ್ವೇ ಮಾಡಿಕೊಡಲು ಸರ್ವೇಯರ್ ಶ್ರೀಧರಚಾರ್ 60 ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದನು.
ರೈತ ಸುಬ್ಬಾರೆಡ್ಡಿ ಎಂಬುವರಿಂದ ಹಣ 10 ಸಾವಿರ ರೂ. ಮುಗಂಡವಾಗಿ ಲಂಚದ ಹಣ ಸ್ಪೀಕರಿಸುವ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದ ಎಸಿಬಿ ಡಿವೈಎಸ್ ಪಿ ವೆಂಕಟೇಶ ನಾಯ್ಡು ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಆರೋಪಿಯನ್ನು ಹಣದ ಸಮೇತ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.