Publish Date: Thu, 12 Sep 2019 (15:03 IST)
Updated Date: Thu, 12 Sep 2019 (15:06 IST)
ಕಾವೇರಿ ನದಿ ಉಳಿವಿಗಾಗಿ ಶುರುವಾಗಿರೋ ಕಾವೇರಿ ಕೂಗು ಇದೀಗ ತಮಿಳುನಾಡಿಗೆ ಪ್ರವೇಶ ಪಡೆದಿದೆ.
ಇಶಾ ಫೌಂಡೇಶನ್'ನ ಜಗ್ಗಿ ವಾಸುದೇವ್ ನೆಡಸುತ್ತಿರುವ ಕಾವೇರಿ ಕೂಗು ಇಂದು ಕರ್ನಾಟಕ ದಾಟಿ ತಮಿಳುನಾಡು ಪ್ರವೇಶಿಸಿದೆ. ಈ ಸಂದರ್ಭದಲ್ಲಿ ವಿಎಚ್'ಪಿ, ಭಜರಂಗದಳ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೈಕ್ ರ್ಯಾಲಿಯನ್ನು ಬಿಳ್ಕೊಟ್ಟರು.
ಇತ್ತ ತಮಿಳುನಾಡಿನ ನಾಗರಿಕರು ಹಾಗೂ ಕಾವೇರಿ ನದಿ ಪಾತ್ರದ ರೈತರು ಬೈಕ್' ರ್ಯಾಲಿಗೆ ಅದ್ದೂರಿ ಸ್ವಾಗತ ಕೋರಿದರು. ತಲಕಾವೇರಿಯಿಂದ ಆರಂಭವಾಗಿರುವ ಕಾವೇರಿ ಕೂಗು ಎಂಬ ಬೈಕ್ ರ್ಯಾಲಿ ಕರ್ನಾಟಕ- ತಮಿಳುನಾಡು ಗಡಿ ಆನೇಕಲ್ ತಾಲೂಕಿನ ಅತ್ತಿಬೆಲೆಗೆ ಆಗಮಿಸಿತು.
ಈ ಸಂದರ್ಭದಲ್ಲಿ ಆನೇಕಲ್ ತಾಲೂಕಿನ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಬೈಕ್ ರ್ಯಾಲಿಗೆ ಸ್ವಾಗತ ಕೋರಿ ತಮಿಳುನಾಡಿಗೆ ಬೀಳ್ಕೊಟ್ಟರು. ಇನ್ನು ತಮಿಳುನಾಡು ಗಡಿಯಲ್ಲಿ ಸಹಸ್ರಾರು ಕಾವೇರಿ ನದಿಪಾತ್ರದ ರೈತರು, ನಾಗರಿಕರು ಜಮಾವಣೆಗೊಂಡು ತಮ್ಮ ರಾಜ್ಯಕ್ಕೆ ರ್ಯಾಲಿಯನ್ನು ಸ್ವಾಗತಿಸಿದರು.