Webdunia - Bharat's app for daily news and videos

Install App

ಅತುಲ್ ಸುಭಾಷ್ ಪತ್ನಿ, ಅತ್ತೆ ಎಲ್ಲರ ಬಂಧನ: ಈಗ ಮಗು ಯಾರ ಬಳಿಯಿರಲಿದೆ

Krishnaveni K
ಭಾನುವಾರ, 15 ಡಿಸೆಂಬರ್ 2024 (11:54 IST)
ಲಕ್ನೋ: ಬೆಂಗಳೂರಿನಲ್ಲಿ ಪತ್ನಿಯ ಮನೆಯವರ ಕಿರುಕುಳದಿಂದಾಗಿ ಉತ್ತರ ಪ್ರದೇಶ ಮೂಲದ ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಆತನ ಪತ್ನಿ ಮತ್ತು ಮನೆಯವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈಗ ಮಗು ಯಾರ ಬಳಿಯಿರಲಿದೆ ಎಂಬ ಪ್ರಶ್ನೆ ಮೂಡಿದೆ.

ಅತುಲ್ ಮತ್ತು ನಿಖಿತಾಗೆ ನಾಲ್ಕೂವರೆ ವರ್ಷದ ವ್ಯೋಮ್ ಎನ್ನುವ ಗಂಡು ಮಗುವಿದೆ. ಈ ಮಗ ಇಷ್ಟು ದಿನವೂ ತಾಯಿಯ ಬಳಿಯೇ ಇದ್ದ. ಸಾಯುವ ಮೊದಲು ಬರೆದಿದ್ದ ಡೆತ್ ನೋಟ್ ನಲ್ಲಿ ಅತುಲ್ ತನ್ನ ಮಗನ ಬಗ್ಗೆಯೂ ಉಲ್ಲೇಖಿಸಿದ್ದ. ಮಗನನ್ನು ನೋಡಲೂ ನನಗೆ ಅವಕಾಶ ಕೊಡುತ್ತಿರಲಿಲ್ಲ ಎಂದಿದ್ದ. ಜೊತೆಗೆ ಆತನ ಕಸ್ಟಡಿಯನ್ನು ನನ್ನ ಹೆತ್ತವರಿಗೆ ನೀಡಿ ಎಂದು ಅತುಲ್ ಕೇಳಿಕೊಂಡಿದ್ದ.

ಕಾನೂನಿನ ಪ್ರಕಾರ ಮಗು ಐದು ವರ್ಷಕ್ಕಿಂತ ಕೆಳ ವಯಸ್ಸಿನವನಾಗಿರುವುದರಿಂದ ಸಹಜವಾಗಿಯೇ ತಾಯಿ ಆತನನ್ನು ನೋಡಿಕೊಳ್ಳುವ ಮೊದಲ ಹಕ್ಕುದಾರಳು. ಆದರೆ ಈಗ ನಿಖಿತಾ ಆಕೆಯ ತಾಯಿ ನಿಶಾ ಮತ್ತು ಸಹೋದರನೂ ಬಂಧಿತರಾಗಿರುವುದರಿಂದ ಮಗು ಅನಾಥವಾಗಿದೆ.

ಆತನನ್ನು ನಮಗೆ ಒಪ್ಪಿಸಿ. ಇದು ನಮ್ಮ ಮಗನ ಕೊನೆಯ ಆಸೆ ಕೂಡಾ ಆಗಿತ್ತು. ಅತುಲ್ ನ ಕೊನೆಯ ಕುರುಹು ಅವನು. ಅವನನ್ನು ನಾವು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಅತುಲ್ ನ ಪೋಷಕರು ಮನವಿ ಮಾಡಿದ್ದಾರೆ. ಸದ್ಯಕ್ಕೆ ಮಗುವಿನ ತಾಯಿ, ಆಕೆಯ ತಾಯಿ ಕೂಡಾ ಬಂಧನದಲ್ಲಿರುವುದರಿಂದ ಸದ್ಯಕ್ಕೆ ಆತನ ಪಾಲನೆಯ ಹಕ್ಕು ಅತುಲ್ ಪೋಷಕರಿಗೆ ಸಿಗುವ ಸಾಧ್ಯತೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments