Publish Date: Sat, 15 Dec 2018 (14:31 IST)
Updated Date: Sat, 15 Dec 2018 (14:33 IST)
ಬೆಟ್ಟದ ನೌಕರರೊಂದಿಗೆ ರಿಷಿಕುಮಾರ ಸ್ವಾಮೀಜಿ ಹೆಜ್ಜೆಹಾಕಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದ ನೌಕರರು ಪ್ರತಿಭಟನೆ ಹಾದಿ ತುಳಿದಿದ್ದಾರೆ. ಪ್ರತಿಭಟನಾನಿರತರನ್ನು ಕಾಳಿಸ್ವಾಮಿ ಭೇಟಿ ಮಾಡಿದ್ದಾರೆ.
ಕಾಳಿಸ್ವಾಮಿ ಖ್ಯಾತಿಯ ರಿಷಿಕುಮಾರ ಸ್ವಾಮೀಜಿಯಿಂದಲೂ ಪ್ರತಿಭಟನೆಗೆ ಬೆಂಬಲ ವ್ಯಕ್ತವಾಗಿದೆ. ನಿಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಇದಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಪ್ರತಿಭಟನೆ ನಿರತರನ್ನು ಉದ್ದೇಶಿಸಿ ಕಾಳಿಸ್ವಾಮಿ ಮಾತನಾಡಿದರು. ಬೆಟ್ಟದ ನೌಕರರಿಗೆ ರಿಷಿಕುಮಾರ ಸ್ವಾಮೀಜಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.