Publish Date: Thu, 30 Aug 2018 (17:24 IST)
Updated Date: Thu, 30 Aug 2018 (17:26 IST)
ಕೇಂದ್ರ ಸರಕಾರಿ ನೌಕರರಿಗೆ ಪ್ರಧಾನಿ ನರೇಂದ್ರ ಮೋದಿ ಶೀಘ್ರವೇ ಮತ್ತೊಂದು ಸಿಹಿ ಸುದ್ದಿ ನೀಡಲಿದ್ದಾರೆ.
ಕೇಂದ್ರ ಸರಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಸಿಗಲಿದೆ. ಮುಂಬರುವ ಗೌರಿ ಗಣೇಶ ಹಬ್ಬದ ಅಂಗವಾಗಿ ಕೇಂದ್ರ ಸರಕಾರಿ ನೌಕರರಿಗೆ ಹೆಚ್ಚುವರಿ ಡಿಎ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಗೌರಿ ಗಣೇಶ ಹಬ್ಬದ ಉಡುಗೊರೆಯಾಗಿ ನೌಕರರ ಸಂಬಳದ ಶೇ. 2 ರಷ್ಟು ಹೆಚ್ಚುವರಿಯಾಗಿ ಡಿ.ಎ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರಿಂದ 48 ಲಕ್ಷ ನೌಕರರು ಮತ್ತು 60 ಲಕ್ಷ ನಿವೃತ್ತ ನೌಕರರಿಗೆ ಲಾಭ ಆಗಲಿದೆ.
ಹಬ್ಬದ ಮೊದಲೇ ಡಿಎ ಹೆಚ್ಚುವರಿ ಆಗಿರುವುದು ನೌಕರರಲ್ಲಿ ಸಹಜವಾಗಿ ಸಂತಸಕ್ಕೆ ಕಾರಣವಾಗಿದೆ.