Publish Date: Wed, 06 Mar 2019 (18:52 IST)
Updated Date: Wed, 06 Mar 2019 (18:55 IST)
ಪ್ರಧಾನಿ ನರೇಂದ್ರ ಮೋದಿ ನೀಡಿರುವ ರಿಮೋಟ್ ಕಂಟ್ರೋಲ್ ಹೇಳಿಕೆಗೆ ಮಾಜಿ ಸಿಎಂ ಟಾಂಗ್ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಗೆ ಯಾರು ರಿಮೋಟ್ ಇದ್ದಾರೆ. ಪ್ರಜಾಪ್ರಭುತ್ವದಲ್ಲಿ ರಿಮೋಟ್ ಅನ್ನೊದೊಂದು ಇರುತ್ತಾ?
ಪೊಲಿಟಿಕಲ್ ಆಗಿ ಮಾತನಾಡಬೇಕು ನಿಜ. ಆದ್ರೆ ಅಸಂಬದ್ಧವಾಗಿ ಮಾತನಾಡಬಾರದು ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮೋದಿ ಅವರು ಈ ದೇಶದ ಪ್ರಧಾನ ಮಂತ್ರಿ. ಅವರ ರಿಮೋಟ್ ಕಂಟ್ರೋಲ್ ಯಾರು ಅಂತಾ ಹೇಳಲ ನಾನು? ಎಂದು ಪ್ರಶ್ನಿಸಿದ ಅವರು, ಮೋದಿ ರಿಮೋಟ್ ಕಂಟ್ರೋಲ್ ಆರ್.ಎಸ್.ಎಸ್. ಆಗಿದೆ ಎಂದು ಟೀಕೆ ಮಾಡಿದರು.