Select Your Language

Notifications

webdunia
webdunia
webdunia
webdunia

ಡಿಕೆಶಿ ಹಣೆ ಬರಹ ನಿರ್ಧರಿಸಿರೋದು ಯಾರು?

ಡಿಕೆ ಶಿವಕುಮಾರ
ಚಿತ್ರದುರ್ಗ , ಶನಿವಾರ, 14 ಸೆಪ್ಟಂಬರ್ 2019 (15:55 IST)
ಯಾರ ಹಣೆ ಬರಹವನ್ನು ಯಾರೂ ನಿರ್ಧರಿಸಿರುವುದಿಲ್ಲ. ಹೀಗಂತ ಡಿಕೆಶಿ ಬಗ್ಗೆ ಸಚಿವ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.

ಡಿಕೆ ಶಿವಕುಮಾರ್ ಅವರನ್ನ ನ್ಯಾಯಾಂಗ ಕಷ್ಟಡಿಗೆ ಕೊಟ್ಟಿರುವುದು ನ್ಯಾಯಾಲಯ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಬೇಕು. ಹೀಗಂತ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ  ಸಿಟಿ ರವಿ ಹೇಳಿದ್ದಾರೆ.

ನಾವು ಎಷ್ಟು ದಿನ ಅಧಿಕಾರಲ್ಲಿ ಇರ್ತಿವಿ ಅನ್ನುವುದು ಮುಖ್ಯವಲ್ಲ. ಯಾರ ಹಣೆ ಬರಹವನ್ನು ಯಾರೂ ನಿರ್ಧರಿಸಿರುವುದಿಲ್ಲ ಅಂತ ಮಾರ್ಮಿಕವಾಗಿ ಹೇಳಿದ್ದಾರೆ.

ರಾಮ ಮಂದಿರವನ್ನು ಕಟ್ಟುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆಕ್ರಮಣಕಾರಿ ಅಕ್ಬರ್ ಅನ್ನು ವೈಭವೀಕರಿಸುವದನ್ನು ಭಕ್ತರು ಸಹಿಸಲ್ಲ. ಯಾರು ಬೆನ್ನಲ್ಲಿ ನಿಂತರೂ ನ್ಯಾಯಾಲಯವೇ ತೀರ್ಮಾನ ಕೊಡಲಿದೆ‌ ಅಂತ ಹೇಳಿದ್ರು.

ಬ್ಯಾಂಕಿಂಗ್ ಎಕ್ಸಾಮ್ ಪ್ರಾದೇಶಿಕ ಭಾಷೆಯಲ್ಲಿ ಕೊಡಬೇಕು ಎಂದು ಆಗ್ರಹಿಸಿದ್ದೆವು. ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿ ತಿದ್ದುಪಡಿಗೆ ಒತ್ತಾಯಿಸುತ್ತೇವೆ ಅಂತ ಸಚಿವ ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಕೆ ಎಲ್ ಎಸ್ ಸಂಸ್ಥಾಪನಾ ದಿನ ಅದ್ಧೂರಿ ಆಚರಣೆ