Select Your Language

Notifications

webdunia
webdunia
webdunia
webdunia

ಸಹಕಾರಿ ವಲಯದ ರಸಗೊಬ್ಬರ ಕಾರ್ಖಾನೆ ಆರಂಭ ಎಲ್ಲಿ?

ಸಹಕಾರಿ ವಲಯದ ರಸಗೊಬ್ಬರ ಕಾರ್ಖಾನೆ ಆರಂಭ ಎಲ್ಲಿ?
ಮಂಗಳೂರು , ಗುರುವಾರ, 29 ಆಗಸ್ಟ್ 2019 (15:17 IST)
ರಾಜ್ಯದಲ್ಲಿ ರಸ ಗೊಬ್ಬರ ಕೊರತೆ ಉಂಟಾಗುತ್ತಿರುವ  ಕಾರಣ ಸಹಕಾರಿ ವಲಯದ ರಸಗೊಬ್ಬರ ಕಾರ್ಖಾನೆ  ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ.

ದಾವಣಗೆರೆ  ಜಿಲ್ಲೆಯ ಹರಿಹರದಲ್ಲಿ  ಸಹಕಾರಿ ವಲಯದ ರಸಗೊಬ್ಬರ ಕಾರ್ಖಾನೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಸಹಕಾರ ಮಹಾ ಮಂಡಲ ಹಾಗೂ ದಕ್ಷಿಣ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದ್ರು.

ಇಸ್ರೇಲ್ ಅಧ್ಯಯನ ಪ್ರವಾಸ ಕೈಗೊಂಡ ಕೃಷಿ ಪತ್ತಿನ  ಸಹಕಾರಿ ಸಂಘಗಳ  ಪದಾಧಿಕಾರಿಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾದ ಸಂವಾದ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ್ರು.

ರಸಗೊಬ್ಬರ ಕಾರ್ಖಾನೆಗೆ ಕೇಂದ್ರ ಸಚಿವರು ನೆರವು ನೀಡುವುದಾಗಿ ಹೇಳಿದ್ದಾರೆ. 300 ಎಕರೆಯಷ್ಟ್ಟು ಜಾಗ  ಗುರುತಿಸಲಾಗಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ನವರು ನೀರು ಮತ್ತು ಜಾಗ ನೀಡುವ ಮೂಲಕ ಸಹಕಾರ ನೀಡಬೇಕಾಗಿದೆ ಎಂದ್ರು.  




Share this Story:

Follow Webdunia kannada

ಮುಂದಿನ ಸುದ್ದಿ

ಸೆಪ್ಟೆಂಬರ್ 7 ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ