Publish Date: Tue, 09 Jul 2019 (17:05 IST)
Updated Date: Tue, 09 Jul 2019 (17:08 IST)
ಗೆಳಯನೊಬ್ಬನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಹಂತಕ ಮಿತ್ರರು ಕೊನೆಗೂ ಸರಳಿನ ಹಿಂದೆ ಸರಿದಿರುವ ಘಟನೆ ನಡೆದಿದೆ.
ಹಣದ ವಿಷಯಕ್ಕಾಗಿ ಗೆಳೆಯನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಆ ಬಳಿಕ ದೇಹವನ್ನು ಕೆರೆಯಲ್ಲಿ ಬಿಸಾಡಿ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರೂ ಆರೋಪಿಗಳನ್ನು 24 ಗಂಟೆಗಳಲ್ಲೇ ಪೊಲೀಸರು ಬಂಧನ ಮಾಡಿದ್ದಾರೆ.
ಕಲಬುರಗಿ ತಾಲೂಕಿನ ಕೊಟನೂರ್ ಗ್ರಾಮದ ಶಾರುಖ್ ಎಂಬುವನನ್ನು ಹಣದ ವಿಷಯಕ್ಕಾಗಿ ಕೊಲೆ ಮಾಡಲಾಗಿತ್ತು. ಆ ಬಳಿಕ ಆತನ ಮೃತ ದೇಹವನ್ನು ಖಾಜಾ ಬಂದೇನವಾಜ್ ದರ್ಗಾ ಹಿಂಬದಿಯಲ್ಲಿರುವ ಕೆರೆಯಲ್ಲಿ ತಂದು ಹಾಕಿ ಹಂತಕರು ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಹಬ್ಬು, ಶಹಬಾಜ್ ಹಾಗೂ ಸಿಕಂದರ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಕೊಲೆ ನಡೆದು 24 ಗಂಟೆಗಳಲ್ಲಿಯೇ ರೋಜಾ ಪೊಲೀಸ್ ಠಾಣೆಯ ಸಿಬ್ಬಂದಿ, ಹಂತಕರನ್ನು ಬಂಧನ ಮಾಡಿದೆ.