Select Your Language

Notifications

webdunia
webdunia
webdunia
webdunia

ಅಬ್ಬಾ ಮಳೆ ಸಾಕಾಯ್ತು ಚಳಿ ಯಾವಾಗ ಎನ್ನುವವರಿಗೆ ಇಲ್ಲಿದೆ ಉತ್ತರ

Bengaluru Rains

Krishnaveni K

ಬೆಂಗಳೂರು , ಸೋಮವಾರ, 27 ಅಕ್ಟೋಬರ್ 2025 (11:00 IST)
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದೆ. ಅಕ್ಟೋಬರ್ ಬಂದರೂ ಮಳೆ ನಿಲ್ಲುತ್ತಿಲ್ಲ. ಮಳೆ ಸಾಕಾಯ್ತು ಚಳಿ ಯಾವಾಗ ಶುರುವಾಗುತ್ತದೆ ಎನ್ನುವವರಿಗೆ ಇಲ್ಲಿದೆ ಉತ್ತರ.

ಈ ಬಾರಿ ಬೇಗನೇ ಆರಂಭವಾಗಿದ್ದ ಮಳೆಗಾಲ ಅಕ್ಟೋಬರ್ ಅಂತ್ಯಕ್ಕೆ ಬಂದರೂ ಮುಗಿದಿಲ್ಲ. ಮೊದಲೇ ಹವಾಮಾನ ಇಲಾಖೆ ಈ ವರ್ಷ ಭಾರೀ ಮಳೆಯಾಗಲಿದೆ ಎಂದು ವರದಿ ನೀಡಿತ್ತು. ಅದರಂತೆ ಈಗಲೂ ಮಳೆಯಾಗುತ್ತಲೇ ಇದೆ. ಹಾಗಿದ್ದರೆ ಕರ್ನಾಟಕದಲ್ಲಿ ಚಳಿಗಾಲ ಶುರುವಾಗೋದು ಯಾವಾಗ?

ಈ ವರ್ಷ ನವಂಬರ್ ತಿಂಗಳಿನಿಂದ ನಿಧಾನವಾಗಿ ಚಳಿಯ ವಾತಾವರಣ ಶುರುವಾಗಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಈ ವರ್ಷ ಡಿಸೆಂಬರ್ ನಿಂದ ಫೆಬ್ರವರಿಯವರೆಗೆ ಚಳಿಗಾಲದ ಗರಿಷ್ಠ ಸಮಯವಾಗಿರುತ್ತದೆ ಎನ್ನಲಾಗಿದೆ.

ಈ ಬಾರಿ ಚಳಿಗಾಲವೂ ವಿಪರೀತ ಎನ್ನುವ ಸ್ಥಿತಿಗೆ ತಲುಪಬಹುದು ಎಂದು ಹವಾಮಾನ ವರದಿ ಹೇಳುತ್ತಿದೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಉಷ್ಣತೆ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪುವ ಸಾಧ್ಯತೆಯಿದೆ.ಇನ್ನೂ ಒಂದೆರಡು ವಾರ ಮಳೆ ಮುಂದುವರಿಯಲಿದ್ದು ಅದಾದ ಬಳಿಕ ವಾತಾವರಣದಲ್ಲಿ ಗಮನಾರ್ಹ ಬದಲಾವಣೆಯಾಗುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಖಾಯಿಲೆ ಬರದೇ ಇರಬೇಕಾದರೆ ಇದೊಂದು ಕೆಲಸ ಮಾಡಿ ಎನ್ನುತ್ತಾರೆ ಡಾ ಸಿಎನ್ ಮಂಜುನಾಥ್