Select Your Language

Notifications

webdunia
webdunia
webdunia
webdunia

ಮುಂಬೈಯಲ್ಲಿ ಕಳೆದುಹೋದ ನಾಯಿ 250ಕಿಮಿ ಪ್ರಯಾಣಿಸಿ ಮತ್ತೇ ತನ್ನ ಊರಿಗೆ ಮರಳಿದಾಗ

Belgavi Nipani Taluk Yamagarni Village

Sampriya

ಬೆಳಗಾವಿ , ಬುಧವಾರ, 31 ಜುಲೈ 2024 (16:53 IST)
Photo Courtesy X
ಬೆಳಗಾವಿ: ಮಹಾರಾಷ್ಟ್ರದ ಪಂಢರಪುರದ ಯಾತ್ರಾಸ್ಥಳದಲ್ಲಿ ಜನಸಂದಣಿಯಲ್ಲಿ ಕಳೆದುಹೋದ ನಾಯಿ ಸುಮಾರು 250ಕಿಮಿ ಪ್ರಯಾಣಿಸಿ ತನ್ನ ಊರು ಸೇರಿದ ಅಚ್ಚರಿ ಘಟನೆ ನಡೆದಿದೆ.

ನಾಯಿ ಗ್ರಾಮಕ್ಕೆ ಬರುತ್ತಿದ್ದ ಹಾಗೇ ಅದಕ್ಕೆ ಹೂವಿನ ಹಾರ ಹಾಕಿ ಅದ್ಧೂರಿ ಸ್ವಾಗತ ಕೋರಲಾಯಿತು. ಈ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯ ನಿಪಾಣಿ ತಾಲೂಕಿನ ಯಮಗರ್ನಿ ಗ್ರಾಮದಲ್ಲಿ ನಡೆದಿದೆ.

ನಾಯಿಯನ್ನು ಅಲ್ಲಿನ ಜನ ಕುಣಿದು ಕುಪ್ಪಳಿಸಿ ಗ್ರಾಮಕ್ಕೆ ಸ್ವಾಗತಿಸಿದ್ದಾರೆ.  ಕಳೆದು ಹೋಗಿದ್ದ ನಾಯಿ ಮರಳಿ ಬಂದಿರುವುದು ಗ್ರಾಮಸ್ಥರ ಪಾಲಿಗೆ ಪವಾಡವೇ ಸರಿ ಎಂಬತಾಗಿದೆ.

ಪ್ರೀತಿಯಿಂದ ಮಹಾರಾಜ್ ಎಂದು ಕರೆಯಲ್ಪಡುವ ನಾಯಿ ದಕ್ಷಿಣ ಮಹಾರಾಷ್ಟ್ರದ ಪಂಡರಪುರದ ಯಾತ್ರಾಸ್ಥಳದಲ್ಲಿ ಜನಸಂದಣಿಯಲ್ಲಿ ಕಳೆದುಹೋಗಿದೆ. ಆದರೆ ತನ್ನವರನ್ನು ಹುಡುಕುತ್ತಾ ನಾಯಿ ಸುಮಾರು 250ಕಿಮಿ ಪ್ರಯಾಣಿಸಿ ತನ್ನ ಊರು ಸೇರಿದೆ. ನಾಯಿಯ ಪ್ರೀತಿಯನ್ನು ನೋಡಿದ ಜನರು ಅಚ್ಚರಿಗೆ ಒಳಗಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೋಸ್ತಿಗಳ ನಡುವೆ ಭಿನ್ನಾಭಿಪ್ರಾಯ ಬೆನ್ನಲ್ಲೇ ಅಮಿತ್ ಶಾರನ್ನು ಭೇಟಿಯಾದ ವಿಜಯೇಂದ್ರ